ದ್ವಿತೀಯ ಪಿಯು ಪರೀಕ್ಷೆ: ಕೆಜಿಎನ್ ಮಹಿಳಾ ಕಾಲೇಜಿಗೆ 100 ಶೇ. ಫಲಿತಾಂಶ

Update: 2020-07-17 11:24 GMT

ವಿಟ್ಲ, ಜು.17: ಮಾಣಿ ದಾರುಲ್ ಇರ್ಶಾದ್ ಅಧೀನದ ಕೆಜಿಎನ್ ಕ್ಯಾಂಪಸ್‌ನ ಕಬಕದ ಮಹಿಳಾ ಕಾಲೇಜು ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 100 ಶೇ. ಫಲಿತಾಂಶ ದಾಖಲಿಸಿದೆ.

ವಿದ್ಯಾರ್ಥಿನಿ ಉಮೈರಾ 549 (91.50 ಶೇ.) ಅಂಕಗಳನ್ನು ಪಡೆದು ಕಾಲೇಜಿಗೆ ಪ್ರಥಮ ಸ್ಥಾನಿಯಾಗಿದ್ದಾರೆ. 518(86 ಶೇ.) ಅಂಕಗಳನ್ನು ಪಡೆದಿರುವ ಫರ್ಹಾನ ಡಿ.ಎಚ್. ಕಾಲೇಜಿಗೆ ದ್ವೀತಿಯ ಹಾಗೂ ಜುವೈರಾ 508(84 ಶೇ.) ತೃತೀಯ ಸ್ಥಾನ ಗಳಿಸಿದ್ದಾರೆ.
 

ಬಾಲಕರ ವಿಭಾಗದಲ್ಲಿ ವಾಣಿಜ್ಯ ವಿಭಾಗವು 87 ಶೇ. ಫಲಿತಾಂಶ ದಾಖಲಿಸಿದ್ದು, ಮುಹಮ್ಮದ್ ಅಶ್ರಫ್ 553(92.16 ಶೇ.) ಹಾಗೂ ಮುಹಮ್ಮದ್ ರಾಶಿದ್ ಕೆ.ಎ. 553 (92.16 ಶೇ.) ಪ್ರಥಮ ಮತ್ತು ಶಾಹುಲ್ ಹಮೀದ್ 511 (85 ಶೇ.) ದ್ವಿತೀಯ ಸ್ಥಾನಿಯಾಗಿದ್ದಾರೆ. ವಿಜ್ಞಾನ ವಿಭಾಗದಲ್ಲಿ ಮುಹಮ್ಮದ್ ರಾಫಿ 543 (90.50 ಶೇ.) ಅಂಕ ಗಳಿಸಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News