ಮೂಡುಬಿದಿರೆ : ದ್ವಿತೀಯ ಪಿಯುಸಿ ಸಾಧಕ ವಿದ್ಯಾರ್ಥಿಗಳ ಮನೆಗೆ ಶ್ಯಾಮಲಾ ಕುಂದರ್ ಭೇಟಿ
ಮೂಡುಬಿದಿರೆ : ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಿ ಊರಿಗೆ ಮತ್ತು ಶಾಲೆಗೆ ಕೀರ್ತಿ ತಂದಿರುವ ಪಣಪಿಲದ ಮೂವರು ಸಾಧಕ ವಿದ್ಯಾರ್ಥಿಗಳ ಮನೆಗೆ ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ಶ್ಯಾಮಲಾ ಕುಂದರ್ ಅವರು ಗುರುವಾರ ಆಗಮಸಿ ಅಭಿನಂದಿಸಿದ್ದಾರೆ.
ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಮೂಡುಬಿದಿರೆ ತಾಲೂಕಿನ ಪಣಪಿಲ ಗ್ರಾಮದ ಅಕಿಂತಾ ವಾಣಿಜ್ಯ ವಿಭಾಗದಲ್ಲಿ ( ಶೇ 98), ಅಸುಂತಾ ಡಿ"ಸೋಜಾ (ಶೇ 96) ಹಾಗೂ ವಿಜ್ಞಾನ ವಿಭಾಗದಲ್ಲಿ ಹರ್ಷಿತಾ (ಶೇ 92) ಅತ್ಯಧಿಕ ಅಂಕಗಳನ್ನು ಗಳಿಸಿದ್ದು ಇವರ ಸಾಧನೆಯನ್ನು ಗಮನಿಸಿರುವ ಶ್ಯಾಮಲಾ ಕುಂದರ್ ಅವರು ಖುದ್ದಾಗಿ ವಿದ್ಯಾರ್ಥಿಗಳ ಮನೆಗೆ ತೆರಳಿ ಮೂವರು ವಿದ್ಯಾರ್ಥಿಗಳನ್ನೂ ಅಭಿನಂದಿಸಿದ್ದಾರೆ.
ದರೆಗುಡ್ಡೆ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಮುನಿರಾಜ ಹೆಗ್ಡೆ ಪಣಪಿಲ, ಸದಸ್ಯರಾದ ಸಂತೋಷ್ ಕೆ.ಪೂಜಾರಿ, ಬಿಜೆಪಿಯ ಪ್ರಮುಖರಾದ ದಿವ್ಯವರ್ಮ ಬಲ್ಲಾಳ್, ಶರತ್ ಶೆಟ್ಟಿ, ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಅಶ್ವಥ್ ಪಣಪಿಲ ಹಾಗೂ ದೀಕ್ಷಿತ್, ಸಚಿನ್ ಈ ಸಂದರ್ಭದಲ್ಲಿದ್ದರು.