ಮೂಡುಬಿದಿರೆ : ಟೆಂಪಲ್‌ಟೌನ್ ರೋಟರಿ ಕ್ಲಬ್ ಅಧ್ಯಕ್ಷರಾಗಿ ಪತ್ರಕರ್ತ ಬಿ. ಸೀತಾರಾಮ ಆಚಾರ್ಯ ಆಯ್ಕೆ
Update: 2020-07-17 19:39 IST
ಮೂಡುಬಿದಿರೆ : ಇಲ್ಲಿನ ರೋಟರಿ ಕ್ಲಬ್ ಆಫ್ ಮೂಡುಬಿದಿರೆ ಟೆಂಪಲ್‌ಟೌನ್ ಇದರ 2020-21ನೇ ಸಾಲಿನ ಅಧ್ಯಕ್ಷರಾಗಿ ಪತ್ರಕರ್ತ ಬಿ. ಸೀತಾರಾಮ ಆಚಾರ್ಯ ಮತ್ತು ಕಾರ್ಯದರ್ಶಿಯಾಗಿ ಪೂರ್ಣಚಂದ್ರ ಜೈನ್ ಆಯ್ಕೆಯಾಗಿದ್ದಾರೆ.
ಕ್ಲಬ್‌ನ ನಿರ್ದೇಶಕರಾಗಿ ರಾಜೇಶ್ ಶಾನುಭಾಗ್ (ಕ್ಲಬ್ ಸರ್ವಿಸ್) ಹರೀಶ್ ಎಂ.ಕೆ. (ಕಮ್ಯೂನಿಟಿ ಸರ್ವಿಸ್), ಉಮ್ಮರ್ ಫಾರೂಕ್ (ವೊಕೇಶನಲ್ ಸರ್ವಿಸ್), ರೋಬರ್ಟ್ ರೊನಾಲ್ಡ್ ಫೆರ್ನಾಂಡಿಸ್ (ಇಂಟರ್‌ನ್ಯಾಷನಲ್ ಸರ್ವಿಸ್), ಮನೋಜ್ ಶೆಣೈ (ಯೂತ್ ಸರ್ವಿಸ್) ಡಾ ಅಮರ್‌ದೀಪ್ (ಪಲ್ಸ್ ಪೋಲಿಯೊ) ಡೆನ್ನಿಸ್ ಪಿರೇರಾ (ಟಿ.ಆರ್.ಎಫ್) ಮಂಜುನಾಥ್ (ಸಿಎಲ್‌ಸಿಸಿ) ಸುದರ್ಶನ್ ಆಚಾರ್ಯ (ವಿನ್ಸ್) ಅಜಯ್ ಗ್ಲೆನ್ ಡಿಸೋಜ (ವಾಟರ್ ಮತ್ತು ಸ್ಯಾನಿಟೇಶನ್) ರಾಧಾಕೃಷ್ಣ ಬೋರ್ಕರ್ (ಡಿಸ್ಟ್ರಿಕ್ಟ್ ಪ್ರೋಜೆಕ್ಟ್) ವಿಠಲ ಪೂಜಾರಿ (ಖಜಾಂಚಿ) ಶಹನ್ ರಾಜ್ ಪಿ.ಎನ್. (ಸರ್ಜಂಟ್) ಚಂದ್ರಹಾಸ ದೇವಾಡಿಗ (ನಿಯೋಜಿತ ಅಧ್ಯಕ್ಷ) ಆಯ್ಕೆಯಾಗಿದ್ದಾರೆ.