×
Ad

ನಿಗದಿತ ಅವಧಿಯಲ್ಲಿ ನಿಯಮಗಳನ್ನು ಅಂತಿಮಗೊಳಿಸದ ಗೃಹ ಸಚಿವಾಲಯ: ಸಿಎಎ ಕಾಯ್ದೆಯ ಅನುಷ್ಠಾನ ವಿಳಂಬ

Update: 2020-07-17 19:49 IST

ಹೊಸದಿಲ್ಲಿ: ನಿಗದಿತ 6 ತಿಂಗಳೊಳಗೆ ನಿಯಮಗಳನ್ನು ಕೇಂದ್ರ ಗೃಹ ಸಚಿವಾಲಯ ಅಂತಿಮಗೊಳಿಸದ ಹಿನ್ನೆಲೆಯಲ್ಲಿ ವಿವಾದಿತ ಪೌರತ್ವ ಕಾಯ್ದೆಯ ಅನುಷ್ಠಾನ ತಡವಾಗಲಿದೆ ಎಂದು thewire.in ವರದಿ ಮಾಡಿದೆ.

ಸಂಸತ್ತಿನ ಪದ್ಧತಿ  ಪ್ರಕಾರ ಅಧಿಸೂಚನೆ ಪ್ರಕಟಗೊಂಡ 6 ತಿಂಗಳೊಳಗಾಗಿ ಸಂಬಂಧಿತ ಕಾಯ್ದೆಯ ನಿಯಮಾವಳಿಗಳು ಅಂತಿಮಗೊಳ್ಳಬೇಕು. ಈ ಅವಧಿಯು ಜೂನ್ 18ರಂದು ಕೊನೆಗೊಂಡಿದೆ ಎಂದು ‘ದ ಅಸ್ಸಾಂ ಟ್ರಿಬ್ಯೂನ್’ ವರದಿ ಮಾಡಿದೆ.

2020ರ ಜನವರಿ 10ರಂದು ಕೇಂದ್ರ ಗೃಹ ಸಚಿವಾಲಯ ಅಧಿಸೂಚನೆ ಪ್ರಕಟಿಸಿತ್ತು ಎಂದು ದ ಹಿಂದೂ ವರದಿ ಮಾಡಿದ್ದು, ಅದರ ಪ್ರಕಾರ ನೋಡುವುದಾದರೆ ಜುಲೈ 10ರಂದು ಈ ಅವಧಿ ಕೊನೆಗೊಳ್ಳುತ್ತದೆ. ಈ ಬಗ್ಗೆ ಸಚಿವಾಲಯ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ವರದಿ ತಿಳಿಸಿದೆ.

1955ರ ಪೌರತ್ವ ಕಾಯ್ದೆ ತಿದ್ದುಪಡಿಗೆ 2019 ಡಿಸೆಂಬರ್ 10ರಂದು ಸಂಸತ್ತು ಅನುಮೋದನೆ ನೀಡಿತ್ತು. 2020 ಜನವರಿಯಲ್ಲಿ ಮೋದಿ ನೇತೃತ್ವದ ಸರಕಾರ ಈ ತಿದ್ದುಪಡಿ ಕಾಯ್ದೆಯ ಕುರಿತು ಅಧಿಸೂಚನೆ ಹೊರಡಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News