ಗಂಗೊಳ್ಳಿ: ಭಾರೀ ಮಳೆಗೆ ಕುಸಿದು ಬಿದ್ದ ಮನೆ; ಲಕ್ಷಾಂತರ ರೂ.ನಷ್ಟ, ನಾಲ್ವರು ಪ್ರಾಣಾಪಾಯದಿಂದ ಪಾರು

Update: 2020-07-17 14:25 GMT

ಕುಂದಾಪುರ, ಜು.17: ಕಳೆದ ಎರಡು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಧಾರಾಕಾರ ಮಳೆಗೆ ಗಂಗೊಳ್ಳಿ ಗ್ರಾಮದ ಮೇಲ್‌ಗಂಗೊಳ್ಳಿ ಯಲ್ಲಿ ಮನೆಯೊಂದು ಕುಸಿದುಬಿದ್ದಿದ್ದು, ಲಕ್ಷಾಂತರ ರೂ. ನಷ್ಟ ಸಂಭವಿಸಿದೆ. ಈ ವೇಳೆ ಮನೆಯಲ್ಲಿದ್ದ ನಾಲ್ವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಮೇಲ್‌ಗಂಗೊಳ್ಳಿ ರಾಮ ಪೈ ಮಠದ ಬಳಿಯ ನಿವಾಸಿ ಮುಕುಂದ ನಾಯಕ್ ಎಂಬವರ ವಾಸ್ತವ್ಯದ ಮನೆ ಭಾರೀ ಮಳೆಗೆ ಗುರುವಾರ ರಾತ್ರಿ ಧರಾಶಾಹಿ ಯಾಗಿದೆ. ಈ ವೇಳೆ ಮನೆಯಲ್ಲಿದ್ದ ಬೆಲೆ ಬಾಳುವ ವಸ್ತುಗಳು, ಪೀಠೋಪಕರಣ, ಇಲೆಕ್ಟ್ರಾನಿಕ್ಸ್ ಸಾಮಾನು ಸಹಿತ ಹೆಚ್ಚಿನ ವಸ್ತುಗಳು ಮನೆಯ ಅವಶೇಷಗಳ ಅಡಿ ಸಿಲುಕಿ ಸಂಪೂರ್ಣ ಹಾನಿಗೊಳಗಾಗಿದೆ.

ರಾತ್ರಿ 9:00 ಗಂಟೆ ಸುಮಾರಿಗೆ ಮನೆಯ ಮೇಲ್ಛಾವಣಿ ಮುರಿದು ಬೀಳುತ್ತಿರುವ ಸದ್ದು ಕೇಳುತ್ತಿದ್ದಂತೆಯೇ ಮನೆಯಲ್ಲಿದ್ದ ಮುಕುಂದ ನಾಯಕ್, ಅವರ ತಾಯಿ, ತಂಗಿ ಮತ್ತು ತಮ್ಮ ಮನೆಯಿಂದ ಹೊರಗೆ ಓಡಿ ಬಂದಿದ್ದರಿಂದ ಮನೆಯಲ್ಲಿದ್ದ ಈ ನಾಲ್ವರು ಕೂದಲೆಳೆಯಂತದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಪರಿಹಾರದ ಭರವಸೆ: ಘಟನೆ ನಡೆದ ಸ್ಥಳಕ್ಕೆ ಗಂಗೊಳ್ಳಿ ಗ್ರಾಮಕರಣಿಕ ರಾಘವೇಂದ್ರ ದೇವಾಡಿಗ, ಗಂಗೊಳ್ಳಿ ಗ್ರಾಪಂ ಸದಸ್ಯ ಬಿ.ಲಕ್ಷ್ಮೀಕಾಂತ ಮಡಿವಾಳ, ಬಿ.ರಾಘವೇಂದ್ರ ಪೈ ಹಾಗೂ ಬಿ.ಗಣೇಶ ಶೆಣೈ ಮತ್ತಿತರರು ಭೇಟಿ ನೀಡಿ ಹಾನಿಯನ್ನು ಪರಿಶೀಲಿಸಿದರು. ಬೈಂದೂರು ಶಾಸಕ ಬಿ.ಎಂ.ಸುಕುಮಾರ್ ಶೆಟ್ಟಿ ಅವರು ಕುಂದಾಪುರ ತಹಶೀಲ್ದಾರ್ ಅವರಿಗೆ ಕರೆ ಮಾಡಿ ಹಾನಿ ಬಗ್ಗೆ ವರದಿ ನೀಡುವಂತೆ ಸೂಚನೆ ನೀಡಿದ್ದಾರೆ. ಅಲ್ಲದೇ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿ ಸರಕಾರದಿಂದ ಪರಿಹಾರ ಒದಗಿಸಿಕೊಡುವ ಭರವಸೆ ನೀಡಿದ್ದಾರೆ.

ಜಿಲ್ಲೆಯಾದ್ಯಂತ ಉತ್ತಮ ಮಳೆ:  ಉಡುಪಿ ನಗರ ಹಾಗೂ ಜಿಲ್ಲೆಯಾದ್ಯಂತ ಶುಕ್ರವಾರ ಉತ್ತಮ ಮಳೆಯಾಗಿದೆ. ಮುಂಜಾನೆಯಿಂದಲೇ ಸುರಿಯುತ್ತಿರುವ ಭಾರೀ ಮಳೆಗೆ ಜಿಲ್ಲೆಯ ಎಲ್ಲಾ ತಾಲೂಕುಗಳ ತಗ್ಗು ಪ್ರದೇಶಗಳಲ್ಲಿ ನೀರು ನಿಂತಿದೆ. ಹಲವು ಕಡೆಗಳಲ್ಲಿ ವಿವಿಧ ಕಾಮಗಾರಿಗಳಿಂದ ಹಾಗೂ ನೀರು ಹರಿದು ಹೋಗಲು ವ್ಯವಸ್ಥೆ ಇಲ್ಲದ ಕಾರಣ ಕೃತಕ ನೆರೆ ಉಂಟಾಗಿದೆ. ಕೆಲವಾರು ರಸ್ತೆಗಳು ನೀರಿನಲ್ಲಿ ಮುಳುಗಿದೆ.

ಬೈಂದೂರು, ಕುಂದಾಪುರ ತಾಲೂಕುಗಳಲ್ಲೂ ಸಹ ಒಳ್ಳೆಯ ಮಳೆಯಾಗುತ್ತಿದೆ. ತಗ್ಗುಪ್ರದೇಶಗಳು ಜಲಾವೃತಗೊಳ್ಳುತ್ತಿವೆ. ನದಿಗಳು ಮತ್ತೆ ತುಂಬಿ ಹರಿಯುತ್ತಿವೆ. ಆದರೆ ಎಲ್ಲೂ ನೆರೆ ಬರುವ ಸೂಚನೆ ಕಂಡುಬಂದಿಲ್ಲ. ಗಾಳಿಯಿಲ್ಲದೆ ಮಳೆ ಮಾತ್ರ ಸುರಿಯುತ್ತಿರುವ ಕಾರಣ ಹೆಚ್ಚಿನ ಸಮಸ್ಯೆ ಉಂಟಾಗಿಲ್ಲ. ಬೈಂದೂರು, ಕುಂದಾಪುರ ತಾಲೂಕುಗಳಲ್ಲೂ ಸಹ ಒಳ್ಳೆಯ ಮಳೆಯಾಗುತ್ತಿದೆ. ತಗ್ಗುಪ್ರದೇಶಗಳು ಜಲಾವೃತಗೊಳ್ಳುತ್ತಿವೆ.

ನದಿಗಳು ಮತ್ತೆ ತುಂಬಿ ಹರಿಯುತ್ತಿವೆ. ಆದರೆ ಎಲ್ಲೂ ನೆರೆ ಬರುವ ಸೂಚನೆ ಕಂಡುಬಂದಿಲ್ಲ. ಗಾಳಿಯಿಲ್ಲದೆ ಮಳೆ ಮಾತ್ರ ಸುರಿಯುತ್ತಿರುವ ಕಾರಣ ಹೆಚ್ಚಿನ ಸಮಸ್ಯೆ ಉಂಟಾಗಿಲ್ಲ. ಉಡುಪಿ: ಉಡುಪಿ ನಗರದಲ್ಲಿ ಸಹ ತಗ್ಗು ಪ್ರದೇಶಗಳೆಲ್ಲ ಜಲಾವೃತವಾಗಿದೆ. ಸತತ ಮಳೆಯಿಂದ ದೊಡ್ಡಣಗುಡ್ಡೆ, ನಿಟ್ಟೂರು ಸಹಿತ ನಗರದ ಕೆಲವು ಕಡೆಗಳ ಮ್ಯಾನ್‌ಹೋಲ್‌ಗಳು ತ್ಯಾಜ್ಯ ನೀರಿನಿಂದ ಉಕ್ಕಿ ಹರಿಯುತ್ತಿದೆ. ತ್ಯಾಜ್ಯ ನೀರು ಮಳೆನೀರಿನೊಂದಿಗೆ ಸೇರಿ ಹರಿಯುತ್ತಿರುವುದರಿಂದ ಸಂಚಾರೂ ಕೆಲವು ಕಡೆ ತ್ರಾಸದಾಯವೆನಿಸಿದೆ.

ಉಡುಪಿ ನಗರದಲ್ಲಿ ಸಹ ತಗ್ಗು ಪ್ರದೇಶಗಳೆಲ್ಲ ಜಲಾವೃತವಾಗಿದೆ. ಸತತ ಮಳೆಯಿಂದ ದೊಡ್ಡಣಗುಡ್ಡೆ, ನಿಟ್ಟೂರು ಸಹಿತ ನಗರದ ಕೆಲವು ಕಡೆಗಳ ಮ್ಯಾನ್‌ಹೋಲ್‌ಗಳು ತ್ಯಾಜ್ಯ ನೀರಿನಿಂದ ಉಕ್ಕಿ ಹರಿಯುತ್ತಿದೆ. ತ್ಯಾಜ್ಯ ನೀರು ಮಳೆನೀರಿನೊಂದಿಗೆ ಸೇರಿ ಹರಿಯುತ್ತಿರುವುದರಿಂದ ಸಂಚಾರವೂ ಕೆಲವು ಕಡೆ ತ್ರಾಸದಾಯವೆನಿಸಿದೆ. ಕರಂಬಳ್ಳಿ ಬಳಿಯಲ್ಲಿರುವ ಶಂಕರ ಶೆಟ್ಟಿ ಅವರ ಮನೆಗೆ ನೆರೆ ನೀರು ನುಗ್ಗಿ ಹಾನಿ ಸಂಭವಿಸಿದೆ. ಪುತ್ತೂರಿನಲ್ಲಿ ಹಲವು ಮನೆಗಳಿಗೆ ಕೃತಕ ನೆರೆ ನೀರು ಹರಿದಿದೆ. ರಾಷ್ಟ್ರೀಯ ಹೆದ್ದಾರಿಯ ನೀರು ಹರಿಯಲು ಸ್ಥಳಾವಕಾಶವಿಲ್ಲದ ಕಾರಣ ಇಂದ್ರಾಳಿಯ ಉಪವನ ನರ್ಸರಿ ಬಳಿ ರಸ್ತೆಯಲ್ಲಿಯೇ ನೀರು ಹರಿದು ಕೃತಕ ನೆರೆ ಸೃಷ್ಟಿಯಾಗಿತ್ತು.

ಜಿಲ್ಲೆಯಲ್ಲಿ 90ಮಿ.ಮೀ. ಮಳೆ: ಇಂದು ಬೆಳಗ್ಗೆ 8:30ಕ್ಕೆ ಮುಕ್ತಾಯ ಗೊಂಡಂತೆ ಹಿಂದಿನ 24 ಗಂಟೆಗಳಲ್ಲಿ ಜಿಲ್ಲೆಯಲ್ಲಿ 90ಮಿ.ಮೀ. ಮಳೆಯಾಗಿದೆ. ಉಡುಪಿಯಲ್ಲಿ 89ಮಿ.ಮೀ., ಕುಂದಾಪುರದಲ್ಲಿ 106.5ಮಿ.ಮೀ., ಕಾರ್ಕಳದಲ್ಲಿ 74.5ಮಿ.ಮೀ. ಮಳೆಯಾದ ಬಗ್ಗೆ ವರದಿ ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News