ಉತ್ತರ ಕನ್ನಡದಲ್ಲಿ ಶುಕ್ರವಾರ 76 ಮಂದಿಗೆ ಕೊರೋನ ಸೋಂಕು ದೃಢ

Update: 2020-07-17 14:50 GMT

ಕಾರವಾರ,ಜು.17:ಉತ್ತರ ಕನ್ನಡ ಜಿಲ್ಲೆಯಲ್ಲಿ ಶುಕ್ರವಾರ 76 ಮಂದಿಗೆ ಕೊರೋನ ಸೋಂಕು ದೃಢಪಟ್ಟಿದೆ.

ಕುಮಟಾದಲ್ಲಿ 22, ಹೊನ್ನಾವರ 19, ಶಿರಸಿಯಲ್ಲಿ 5, ಮುಂಡಗೋಡ 4, ಅಂಕೋಲಾ 4, ಕಾರವಾರದಲ್ಲಿ 5, ಹಳಿಯಾಳ 6, ಭಟ್ಕಳ 9, ಸಿದ್ದಾಪುರ, ಯಲ್ಲಾಪುರದಲ್ಲಿ ತಲಾ ಒಂದು ಮಂದಿಗೆ ಸೋಂಕು ಖಚಿತವಾಗಿದೆ.

ಕುಮಟಾ ತಾಲೂಕಿನಲ್ಲಿ ಶುಕ್ರವಾರ ಅತೀ ಹೆಚ್ಚು ಪ್ರಕರಣಗಳು ಪತ್ತೆಯಾಗಿದೆ. ಈ ಪೈಕಿ 18ರ ಯುವತಿ, 3ರ ಬಾಲಕಿ, 36, 39, 47ರ ಮಹಿಳೆ, 20, 21ರ ಯುವತಿ, 65, 64, 68ರ ವೃದ್ಧೆ, 35, 64, 62, 25ರ ,26, 53ರ ವ್ಯಕ್ತಿಯ ಟ್ರಾವೇಲ್ ಹಿಸ್ಟ್ರಿ ಪತ್ತೆಯಾಗಿಲ್ಲ. 40, 45 ಮಹಿಳೆ, 21ರ ಯುವತಿ, 85ರ ವೃದ್ಧೆ, 48 ಪುರುಷ ಸಂಪರ್ಕದಿಂದ ಸೋಂಕು ತಗುಲಿದೆ.

ಶಿರಸಿ ತಾಲೂಕಿನಲ್ಲಿ ಐದು ಪ್ರಕರಣಗಳು ಪತ್ತೆಯಾಗಿದ್ದು ಇದರಲ್ಲಿ 46ರ ಮಹಿಳೆ, 27ರ ಯುವಕ, 34 ರ ವ್ಯಕ್ತಿಯ ಟ್ರಾವೇಲ್ ಹಿಸ್ಟ್ರಿ ಪತ್ತೆಯಾಗಿಲ್ಲ. 53ರ ಮಹಿಳೆ, 71ರ ವೃದ್ಧ ಸೋಂಕಿನ ಸಂಪರ್ಕಕ್ಕೆ ಬಂದಿದ್ದರಿಂದ ಕೊರೊನಾ ಬಂದಿದೆ.

ಹೊನ್ನಾವರದಲ್ಲಿ 19 ಪ್ರಕರಣಗಳು ಪತ್ತೆಯಾಗಿದ್ದು 45ರ  ಮಹಿಳೆ, 29, 21, 26ರ ಯುವಕ, 38ರ ವ್ಯಕ್ತಿಯಲ್ಲಿ ಸೋಂಕು ಪತ್ತೆಯಾಗಿದ್ದು, ಅನ್ಯ ರಾಜ್ಯದಿಂದ ಬಂದಿದ್ದಾರೆ. ಅದರಂತೆ 36ರ ಮಹಿಳೆ, 43ರ ವ್ಯಕ್ತಿ, 39, 58,40, 33ರ ವ್ಯಕ್ತಿಯಲ್ಲಿ ಸೋಂಕು ಪತ್ತೆಯಾಗಿದ್ದು ಟ್ರಾವೇಲ್ ಹಿಸ್ಟ್ರಿ ಪತ್ತೆಯಾಗಿಲ್ಲ. ಅದರಂತೆ ಗುಣಲಕ್ಷಣ ಹೊಂದಿರುವ 38ರ ಮಹಿಳೆ, 25ರ ಯುವಕನಲ್ಲಿ ಸೋಂಕಿದೆ. ಅದರಂತೆ ವಿಧೇಶದಿಂದ ಬಂದ 36, 29ರ ವ್ಯಕ್ತಿಯಲ್ಲಿ ಸೋಂಕು ಪತ್ತೆಯಾಗಿದೆ. 29, 19, 37ರ ವ್ಯಕ್ತಿಯಲ್ಲೂ ಸೋಂಕು ದೃಢಪಟ್ಟಿದ್ದು ಸೋಂಕಿತರ ಸಂಪರ್ಕಕ್ಕೆ ಒಳಗಾಗಿದ್ದಾರೆ.

ಮುಂಡಗೋಡದಲ್ಲಿ ನಾಲ್ಕು ಪ್ರಕರಣಗಳು ಪತ್ತೆಯಾಗಿದ್ದು 21 ಯುವತಿ, 12 ಬಾಲಕ ಸೋಂಕಿತರ ಸಂಪರ್ಕಕ್ಕೆ ಒಂದಿದ್ದು 34,39 ಅನ್ಯರಾಜ್ಯದಿಂದ ಬಂದಿದ್ದಾರೆ. ಅಂಕೋಲಾದಲ್ಲಿ 4 ಪ್ರಕರಣ ಪತ್ತೆಯಾಗಿದ್ದು 25ರ ಯುವತಿ, 7ರ ಬಾಲಕಿ ಟ್ರಾವೇಲ್ ಹಿಸ್ಟ್ರಿ ಪತ್ತೆಯಾಗಿಲ್ಲ. 39, 24ರ ವ್ಯಕ್ತಿಯಲ್ಲಿ ಸೋಂಕು ಪತ್ತೆಯಾಗಿದೆ.

ಕಾರವಾರದಲ್ಲಿ ಐದು ಪ್ರಕರಣಗಳು ಪತ್ತೆಯಾಗಿದ್ದು 33, 28, 31, 30, 37 ವ್ಯಕ್ತಿಯಲ್ಲಿ ಸೋಂಕು ಪತ್ತೆಯಾಗಿದ್ದು ಟ್ರಾವೇಲ್ ಹಿಸ್ಟ್ರಿ ಪತ್ತೆಯಾಗಿಲ್ಲ.

ಭಟ್ಕಳ ತಾಲೂಕಿನಲ್ಲಿ 9 ಪ್ರಕರಣಗಳು ಪತ್ತೆಯಾಗಿದ್ದು 34ರ ಮಹಿಳೆ, 24 ಯುವತಿ, 4 ಬಾಲಕಿ, 65, 42, 30, 52, 58, 38 ವ್ಯಕ್ತಿಯಲ್ಲಿ ಸೋಂಕು ಪತ್ತೆಯಾಗಿದ್ದು, ಟ್ರಾವೇಲ್ ಹಿಸ್ಟ್ರಿ ಪತ್ತೆಯಾಗಿಲ್ಲ. ಜಿಲ್ಲಾಡಳಿ ಟ್ರಾವೇಲ್ ಹಿಸ್ಟ್ರಿ ಪತ್ತೆಗೆ ಮುಂದಾಗಿದೆ. ಹಳಿಯಾಳ ತಾಲೂಕಿನಲ್ಲಿ ಆರು ಪ್ರಕರಣಗಳು ಪತ್ತೆಯಾಗಿದ್ದು ಅನ್ಯ ರಾಜ್ಯದಿಂದ ಬಂದ 5, 7ರ ಬಾಲಕ, 25, 39 ವ್ಯಕ್ತಿ ಸೋಂಕಿದ್ದು 45 ಪ್ರಾಥಮಿಕ ಸಂಪರ್ಕ ಹಾಗೂ 25 ಯುವಕನಲ್ಲಿ ಸೋಂಕು ಪತ್ತೆಯಾಗಿದೆ. ಯಲ್ಲಾಪುರಲ್ಲಿ ಒಂದು ಪ್ರಕರಣ ಪತ್ತೆಯಾಗಿದ್ದು 26 ಯುವಕ ಟ್ರಾವೇಲ್ ಹಿಸ್ಟ್ರಿ ಪತ್ತೆಯಾಗಿಲ್ಲ. ಅದರಂತೆ ಸಿದ್ದಾಪುರದಲ್ಲಿ 43ರ ವ್ಯಕ್ತಿಯಲ್ಲಿ ಸೋಂಕು ಪತ್ತೆಯಾಗಿದ್ದು ವಿಧೇಶದಿಂದ ಜಿಲ್ಲೆಗೆ  ವಾಪಸ್ಸಾಗಿದ್ದ.

900 ಗಡಿ ದಾಟಿದ ಸೋಂಕಿತರು: ಉತ್ತರ ಕನ್ನಡ ಜಿಲ್ಲೆಯಲ್ಲಿ ಈವರೆಗೆ 901 ಪ್ರಕರಣಗಳು ದಾಖಲಾಗಿದೆ. ಇದರಿಂದ ಜನರಲ್ಲಿ ಆತಂಕ ಹೆಚ್ಚಿದ್ದು ಹೆಚ್ಚಿನ ಪ್ರಕರಣಗಳು ಭಟ್ಕಳದಲ್ಲೇ ದಾಖಲಾಗಿದೆ. ಅಂಕೋಲಾದಲ್ಲಿ 31, ಭಟ್ಕಳ 265, ಹಳಿಯಾಳ 124, ಹೊನ್ನಾವರ 80, ಜೊಯಿಡಾ 6, ಕಾರವಾರ 69, ಕುಮಟಾ 117, ಮುಂಡಗೋಡ 51, ಸಿದ್ದಾಪುರ 15, ಶಿರಸಿ 81,ಯಲ್ಲಾಪುರದಲ್ಲಿ 62 ಪ್ರಕರಣಗಳು ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News