ದ್ವಿತೀಯ ಪಿಯುಸಿ ಪರೀಕ್ಷೆ: ಗ್ರೀನ್ ವೀವ್ ಕಾಲೇಜಿಗೆ ಶೇ.100 ಫಲಿತಾಂಶ

Update: 2020-07-17 17:17 GMT

ಮಂಗಳೂರು, ಜು.17: ತಾಲೂಕಿನ ಕೊಣಾಜೆ ಗ್ರಾಮದ ಅಡ್ಕರೆಪಡ್ಪುನಲ್ಲಿರುವ ಗ್ರೀನ್ ವೀವ್ ಪದವಿ ಪೂರ್ವ ಕಾಲೇಜಿನಿಂದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ.100ರ ಫಲಿತಾಂಶ ದಾಖಲಿಸಿದೆ.

 ಪರೀಕ್ಷೆಗೆ ಹಾಜರಾದ ಎಲ್ಲ 23 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಶೇ.100 ಫಲಿತಾಂಶ ಗಳಿಸಿದ್ದಾರೆ. ಆಯಿಷತುಲ್ ನಾಝ್ಮ (ಶೇ.93)- ಪ್ರಥಮ ಹಾಗೂ ಅನ್ನತ್ ನಾಫಿಯಾ (ಶೇ.92)- ದ್ವಿತೀಯ ಸ್ಥಾನವನ್ನು ಪಡೆದಿದ್ದಾರೆ.

 ಮರ್ಝಾನ (ಶೇ.91.08), ಫರ್ಝಾನ (ಶೇ.89.06), ಖದೀಜತುಲ್ ರಿಝ್ಮಿನ (ಶೇ.88.08), ಆರಿಫಾಬಾನು (ಶೇ.85.85), ತಮೀಮಾ (ಶೇ.84.33), ಸಾಜಿದಾಬಾನು (ಶೇ.84), ಫಾತಿಮತ್ ಫರ್ಝಾನ (ಶೇ.84)- ವಿಶಿಷ್ಟ ಶ್ರೇಣಿಯೊಂದಿಗೆ ಹಾಗೂ ಉಳಿದ 17 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯೊಂದಿಗೆ ಉತ್ತೀರ್ಣರಾಗಿದ್ದಾರೆ ಎಂದು ಸಂಸ್ಥೆಯ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News