×
Ad

​ಪಾಕ್ ಉಗ್ರ ವಿಶ್ವಸಂಸ್ಥೆಯ ಭಯೋತ್ಪಾದಕರ ಪಟ್ಟಿಗೆ

Update: 2020-07-17 23:26 IST

ವಿಶ್ವಸಂಸ್ಥೆ, ಜು. 17: ತೆಹ್ರೀಕೆ ತಾಲಿಬಾನ್ ಪಾಕಿಸ್ತಾನ್ (ಟಿಟಿಪಿ) ಭಯೋತ್ಪಾದಕ ಗುಂಪಿನ ನೂರ್ ವಾಲಿ ಮೆಹ್ಸೂದ್ ನನ್ನು ಭಯೋತ್ಪಾದಕ ಎಂಬುದಾಗಿ ವಿಶ್ವಸಂಸ್ಥೆಯು ಗುರುವಾರ ಘೋಷಿಸಿದೆ. 

ಅಲ್_ಖಾಯಿದ ಭಯೋತ್ಪಾದಕ ಸಂಘಟನೆಯ ಪರವಾಗಿ ಹಾಗೂ ಅದರೊಂದಿಗೆ ನಂಟು ಹೊಂದಿರುವ ಗುಂಪುಗಳಿಗೆ ಬೆಂಬಲಾರ್ಥವಾಗಿ ಹಣಕಾಸು ಪೂರೈಸಿರುವುದಕ್ಕಾಗಿ, ಪಿತೂರಿಗಳನ್ನು ರೂಪಿಸಿರುವುದಕ್ಕಾಗಿ ಹಾಗೂ ಭಯೋತ್ಪಾದಕ ಕತ್ಯಗಳನ್ನು ನಡೆಸಿರುವುದಕ್ಕಾಗಿ ಅವನ ವಿರುದ್ಧ ಈ ಕ್ರಮ ತೆಗೆದುಕೊಳ್ಳಲಾಗಿದೆ.
2018 ಜೂನ್ ನಲ್ಲಿ, ವೌಲಾನಾ ಫಝ್ಲುಲ್ಲಾನ ಸಾವಿನ ಬಳಿಕ ಮೆಹ್ಸೂದ್ ನನ್ನು ತೆಹ್ರೀಕೆ ತಾಲಿಬಾನ್ ಪಾಕಿಸ್ತಾನ್ ನ ಮುಖ್ಯಸ್ಥನಾಗಿ ನೇಮಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News