ಸೀಲ್ ಡೌನ್ ಮಾಡಿದ ಮನೆಗಳಿಗೆ ಅವಶ್ಯಕ ಸಾಮಾಗ್ರಿಗಳನ್ನು ಒದಗಿಸಲು ಡಿ.ವೈ.ಎಫ್.ಐ ಒತ್ತಾಯ ‌ ‌‌‌‌‌‌‌‌‌‌‌‌‌

Update: 2020-07-17 18:06 GMT

ವಿಟ್ಲ, ಜು.17:  ಕೊರೋನ ಪಾಸಿಟಿವ್ ವರದಿ ಬಂದರೆ ಅವರ ಮನೆಗಳನ್ನು ಸ್ಥಳೀಯಾಡಳಿತವು ಸೀಲ್ ಡೌನ್ ಮಾಡುತ್ತದೆ. ಆದರೆ ಸೀಲ್ ಡೌನ್ ಮಾಡಿದರೆ, ಆ ಮನೆಗಳ ಸದಸ್ಯರು ಮನೆಯಿಂದ ಹದಿನಾಲ್ಕು ದಿನಗಳ ಕಾಲ ಹೊರಗೆ ಬರಲು ಅವಕಾಶ ಇರುವುದಿಲ್ಲ. ಇಂತಹ ಸಮಯದಲ್ಲಿ ಮನೆಯವರಿಗೆ ಬೇಕಾದ ಅವಶ್ಯಕ ಸಾಮಾಗ್ರಿಗಳನ್ನು ತಲುಪಿಸುವುದು ಸ್ಥಳೀಯ ಆಡಳಿತದ ಜವಾಬ್ದಾರಿಯಾಗಿದೆ. ಅದರೆ ಸ್ಥಳೀಯ ಆಡಳಿತವು ಕೇವಲ ಮನೆಗಳನ್ನು ಸೀಲ್ ಡೌನ್ ಮಾಡಿದ ನಂತರ ಆ ಮನೆಗಳ ಬಗ್ಗೆ ಯಾವುದೇ ಗಮನ ಹರಿಸದೇ ಇರುವ ಬಗ್ಗೆ ವರದಿಯಾಗುತ್ತಿದೆ. ವಿಟ್ಲ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಹಲವು ಕೊರೋನ ಪಾಸಿಟಿವ್ ವರದಿ ಆಗಿರುವುದರಿಂದ ಕೆಲ ಮನೆಗಳನ್ನು ಸೀಲ್ ಡೌನ್ ಮಾಡಲಾಗಿದ್ದು, ಆದರೆ ವಿಟ್ಲ ಪಟ್ಟಣ ಪಂಚಾಯತ್ ಆಗಲಿ ಕಂದಾಯ ಇಲಾಖೆ ಆಗಲಿ ಆ ಮನೆಯವರಿಗೆ ಯಾವುದೇ ಸಾಮಾಗ್ರಿ ವಿತರಿಸಿಲ್ಲ, ಸ್ಥಳೀಯ ಆಡಳಿತದ ಈ‌ ವರ್ತನೆಯು ತೀವ್ರ ನಿರ್ಲಕ್ಷ್ಯದ ಕ್ರಮವಾಗಿದೆ ಎಂದು ಡಿ.ವೈ.ಎಫ್.ಐ ವಿಟ್ಲ ಸಮಿತಿ ಆರೋಪಿಸಿದೆ.

ಸೀಲ್ ಡೌನ್ ಮಾಡುವಾಗ ಮನೆಯ ಸದಸ್ಯರ ಜೊತೆ ಅಧಿಕಾರಿಗಳು ಅಸಭ್ಯ ರೀತಿಯಲ್ಲಿ ವರ್ತಿಸಿದ ಘಟನೆಗಳು ನಡೆದಿದೆ ಎಂದು ಡಿ.ವೈ.ಎಫ್.ಐ ಆರೋಪಿಸಿದೆ. ಸೀಲ್ ಡೌನ್ ಮಾಡಿದ ಮನೆಗಳಿಗೆ ಅವಶ್ಯಕವಾಗಿರುವ ಸಾಮಾಗ್ರಿಗಳನ್ನು ಒದಗಿಸಬೇಕೆಂದು ಡಿ.ವೈ.ಎಫ್.ಐ ವಿಟ್ಲ ವಲಯ ಸಮಿತಿಯು‌ ಸ್ಥಳೀಯಾಡಳಿತವನ್ನು ಒತ್ತಾಯಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News