ಪುತ್ತೂರು ತಾಲೂಕಿನಲ್ಲಿ 6 ಕೊರೋನ ಪ್ರಕರಣಗಳು ಪತ್ತೆ

Update: 2020-07-18 06:33 GMT

ಪುತ್ತೂರು: ಜು.18ರಂದು ತಾಲೂಕು ಆರೋಗ್ಯ ಇಲಾಖೆಯ ಬೆಳಗ್ಗಿನ ಬುಲೆಟಿನ್ ಮಾಹಿತಿಯಂತೆ ಪುತ್ತೂರು ತಾಲೂಕಿನಲ್ಲಿ 6 ಕೊರೋನ ಸೋಂಕು ಪ್ರಕರಣಗಳು ಪತ್ತೆಯಾಗಿದ್ದು, ಪುತ್ತೂರು ನಗರಸಭಾ ವ್ಯಾಪ್ತಿಯಲ್ಲಿ 4 ಮತ್ತು ಗ್ರಾಮಾಂತರದಲ್ಲಿ 2 ಮಂದಿಗೆ ಕೊರೋನಾ ಸೋಂಕು ದೃಢಪಟ್ಟಿದೆ.

ಪುತ್ತೂರು ನಗರಸಭೆ ವ್ಯಾಪ್ತಿಯ ಮೊಟ್ಟೆತ್ತಡ್ಕ ನಿವಾಸಿಯ 30 ವರ್ಷದ ಯುವಕ, ಕತ್ತಾರಿನಿಂದ ಬಂದು ಬೆಂಗಳೂರಿನಲ್ಲಿ ಕ್ವಾರಂಟೈನ್‌ ನಲ್ಲಿರುವ ಸಂಪ್ಯ ಉದಯಗಿರಿಯ 37 ವರ್ಷದ ಯುವಕ, ನೆಹರುನಗರದ 25 ವರ್ಷದ ಯುವಕ, ಕೆಮ್ಮಿಂಜೆ ನಿವಾಸಿಯಾಗಿದ್ದು ಅಮೇರಿಕದಿಂದ ಬಂದು ಪುತ್ತೂರು ಖಾಸಗಿ ಲಾಡ್ಜ್‌ ನಲ್ಲಿ ಕ್ವಾರಂಟೈನ್‌ನಲ್ಲಿರುವ 64 ವರ್ಷದ ಮಹಿಳೆ ಮತ್ತು ಗ್ರಾಮಾಂತರ ವ್ಯಾಪ್ತಿಯ ವೆನ್‌ಲಾಕ್ ಆಸ್ಪತ್ರೆಯಲ್ಲಿ ದಾಖಲಾಗಿರುವ ಶಾಂತಿಗೋಡು 55 ವರ್ಷದ ವ್ಯಕ್ತಿ ಮತ್ತು ಪುತ್ತೂರು ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿರುವ ಕಡಬ ತಾಲೂಕಿನ ಕೊಲ ಕೊಣೆಮಜಲು ನಿವಾಸಿ 22 ವರ್ಷದ ಯುವತಿಗೆ ಕೊರೋನ ದೃಢಪಟ್ಟಿದೆ.

ಮೊಟೆತ್ತಡ್ಕ ನಿವಾಸಿಯ ಯುವಕ ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ. ಅಶೋಕ್ ಕುಮಾರ್ ರೈ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News