ದ.ಕ. ಜಿಲ್ಲೆಯಲ್ಲಿ ರವಿವಾರ ಲಾಕ್‌ಡೌನ್ ನಲ್ಲಿ ವಿನಾಯಿತಿ ಇಲ್ಲ: ಜಿಲ್ಲಾಧಿಕಾರಿ
Update: 2020-07-18 12:05 IST
ಮಂಗಳೂರು, ಜು.18: ದ.ಕ. ಜಿಲ್ಲೆಯಲ್ಲಿ ರವಿವಾರ (ಜು.19) ಲಾಕ್‌ಡೌನ್ ನಲ್ಲಿ ವಿನಾಯಿತಿ ಇಲ್ಲ ಎಂದು ಜಿಲ್ಲಾಧಿಕಾರಿ ಸಿಂಧೂ ರೂಪೇಶ್ ತಿಳಿಸಿದ್ದಾರೆ.
ಈಗಾಗಲೇ ಜುಲೈ 15ರ ರಾತ್ರಿಯಿಂದ ಜಿಲ್ಲೆಯಲ್ಲಿ ಒಂದು ವಾರಗಳ ಕಾಲ ಲಾಕ್‌ಡೌನ್ ಘೋಷಿಸಲಾಗಿದೆ. ಪ್ರತಿ ದಿನ ಬೆಳಗ್ಗೆ 8 ರಿಂದ 11 ಗಂಟೆಯ ತನಕ ಇರುವ ಲಾಕ್ ಡೌನ್ ರಿಯಾಯಿತಿ ರವಿವಾರ ಇರುವುದಿಲ್ಲ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.