ಹಿರಿಯ ಭಾಷಾ ವಿಜ್ಞಾನಿ ಡಾ.ಯು.ಪಿ.ಉಪಾಧ್ಯಾಯ ನಿಧನ
Update: 2020-07-18 12:27 IST
ಉಡುಪಿ, ಜು.18: ಹಿರಿಯ ಭಾಷಾ ವಿಜ್ಞಾನಿ, ಜಾನಪದ ವಿದ್ವಾಂಸ ಕಾಪು ಮಜೂರು ಗ್ರಾಮದ ನಿವಾಸಿ ಡಾ.ಯು.ಪಿ.ಉಪಾಧ್ಯಾಯ(88) ಶುಕ್ರವಾರ ರಾತ್ರಿ ಅಲ್ಪಕಾಲದ ಅಸೌಖ್ಯದಿಂದ ಮಣಿಪಾಲ ಆಸ್ಪತ್ರೆಯಲ್ಲಿ ನಿಧನರಾದರು.
ಕನ್ನಡ, ತುಳು, ಸಂಸ್ಕೃತ, ಮಲಯಾಳಂ, ತಮಿಳು, ಇಂಗ್ಲಿಷ್, ಫ್ರೆಂಚ್, ಆಫ್ರಿಕನ್ ಭಾಷೆಗಳಲ್ಲಿ ಪ್ರಭುತ್ವ ಹೊಂದಿರುವ ಇವರು, ‘ಭೂತ ವರ್ಷಿಪ್’, ‘ಫೋಕ್ ರಿಚುವಲ್ಸ್’, ‘ಫೋಕ್ ಎಫಿಕ್ಸ್ ಆಫ್ ತುಳುನಾಡು’, ‘ಕಾನ್ವರೇಶನಲ್ ಕನ್ನಡ’ ಕೃತಿಗಳನ್ನು ರಚಿಸಿದ್ದಾರೆ. ತುಳು ನಿಘಂಟು ಯೋಜನೆಗಾಗಿ ಆಫ್ರಿಕಾದ ಸೆನಗ್ ಡೆಕಾರ್ ವಿವಿ ಉದ್ಯೋಗವನ್ನು ತೊರೆದು ಉಡುಪಿಗೆ ಬಂದು 18 ವರ್ಷಗಳ ಕಾಲ ಪರಿಶ್ರಮ ಪಟ್ಟು 3400 ಪುಟಗಳ ಆರು ಸಂಪುಟಗಳ ತುಳು ನಿಘಂಟು ರಚಿಸಿದ್ದಾರೆ.