×
Ad

ಎಎಸ್ಸೈಗೆ ಕೊರೋನ: ಕುಂದಾಪುರ ಠಾಣೆ ಸೀಲ್‌ಡೌನ್

Update: 2020-07-18 18:19 IST

ಕುಂದಾಪುರ, ಜು.18:ಎಎಸ್‌ಐ ಒಬ್ಬರಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿರುವ ಹಿನ್ನೆಲೆಯಲ್ಲಿ ಕುಂದಾಪುರ ಪೊಲೀಸ್ ಠಾಣೆಯನ್ನು ಇಂದು ಸೀಲ್‌ಡೌನ್ ಮಾಡಲಾಗಿದೆ.

ಹೈವೇ ಪಟ್ರೋಲ್ ಕರ್ತವ್ಯದಲ್ಲಿದ್ದ 54ವರ್ಷ ಪ್ರಾಯದ ಎಎಸ್‌ಐ, ಜುಲೈ 10ರಿಂದ ಶಿಫ್ಟ್ ಕರ್ತವ್ಯದ ಹಿನ್ನೆಲೆಯಲ್ಲಿ ಮನೆಯಲ್ಲಿಯೇ ಉಳಿದುಕೊಂಡಿದ್ದರು. ಆದರೆ ಇವರು ಕರ್ತವ್ಯದಲ್ಲಿದ್ದ ಹೈವೇ ಪಟ್ರೋಲ್ ಚಾಲಕ, ಇನ್ನೋರ್ವ ಎಎಸ್‌ಐಗೆ ಇತ್ತೀಚೆಗೆ ಪಾಸಿಟಿವ್ ಬಂದಿರುವ ಹಿನ್ನೆಲೆ ಇವರನ್ನು ಕೊರೋನ ಪರೀಕ್ಷೆಗೆ ಒಳಪಡಿಸಲಾಗಿತ್ತು.

ಇದೀಗ ಇವರ ವರದಿಯಲ್ಲಿ ಕೊರೋನಾ ಪಾಸಿಟಿವ್ ಎಂದು ಬಂದಿದೆ. ಅದರಂತೆ ಕುಂದಾಪುರ ಠಾಣೆಯನ್ನು ಬಂದ್ ಮಾಡಿ, ತಾತ್ಕಾಲಿಕವಾಗಿ ಸಮೀಪದ ಐಬಿಗೆ ಸ್ಥಳಾಂತರಿಸಲಾಗಿದೆ. ಸೋಂಕಿತ ಎಎಸ್ಸೈಯನ್ನು ಸಂಪರ್ಕಿಸಿರುವ ಠಾಣಾ ಎಎಸ್ಸೈ ಹಾಗೂ ಕೆಲ ಸಿಬ್ಬಂದಿಗಳನ್ನು ಹೋಂ ಕ್ವಾರೆಂಟೈನ್ಗೆ ಒಳಪಡಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News