ಎಸ್ಸೆಸ್ಸೆಫ್ ಉಡುಪಿ ಡಿವಿಷನ್ ನೂತನ ಕಛೇರಿ ಉದ್ಘಾಟನೆ
ಉಡುಪಿ, ಜು.18: ಎಸ್ಸೆಸ್ಸೆಫ್ ಉಡುಪಿ ಡಿವಿಷನ್ ಹಾಗೂ ಚಿಸ್ತಿಯ್ಯಿ ದ್ರಿಕ್ಸ್ ಸ್ವಲಾತ್ ಕಮಿಟಿ ಇದರ ನೂತನ ಕಛೇರಿಯ ಉದ್ಘಾಟನೆ ಉಡುಪಿಯ ಅಂಬಾಗಿಲು ಬಳಿ ಜು.17ರಂದು ನಡೆದಿದೆ.
ಉಡುಪಿ ಡಿವಿಷನ್ ಅಧ್ಯಕ್ಷ ಸೈಯ್ಯದ್ ಯೂಸುಫ್ ನವಾಝ್ ತಂಙಳ್ ಹೂಡೆ ಅಧ್ಯಕ್ಷತೆಯಲ್ಲಿ, ರಂಗನಕೆರೆ ಮಸೀದಿ ಖತೀಬ್ ಸೈಯ್ಯದ್ ಇಬ್ರಾಹಿಂ ಜುನೈದಿ ಅರ್ರಿಫಾಯಿ ತಂಙಳ್ ದುವಾ ನೆರವೇರಿಸಿದರು. ಎಸ್ಸೆಸ್ಸೆಫ್ ರಾಜ್ಯ ಸಮಿತಿ ಕೋಶಾಧಿಕಾರಿ ರವೂ್ ಖಾನ್ ಕುಂದಾಪುರ ಉದ್ಘಾಟಿಸಿದರು.
ಕೆಸಿಎಫ್ ಸದಸ್ಯರಾದ ಕಯ್ಯೂಮ್ ಮಲ್ಪೆ, ಡಿವಿಷನ್ ಗೌರವ ಸಲಹೆಗಾರ ರಶೀದ್ ಉಸ್ತಾದ್ ಕಟಪಾಡಿ, ಟಿಯುಆರ್‌ಸಿ ಚೇಯರ್ ಮೆನ್ ರಝಾಕ್ ಉಸ್ತಾದ್ ಅಂಬಾಗಿಲು ಹಿರಿಯರಾದ ಎಸ್.ಎಂ.ಶಮೀರ್ ಅಂಬಾಗಿಲು, ಡಿವಿಷನ್ ಉಪಾಧ್ಯಕ್ಷರಾದ ಅಬ್ದುಲ್ ಮಜೀದ್ ಕಟಪಾಡಿ, ಶಾಹುಲ್ ದೊಡ್ಡಣಗುಡ್ಡೆ, ಕಾರ್ಯದರ್ಶಿಗಳಾದ ಇಬ್ರಾಹಿಂ ಆರ್.ಕೆ, ನವಾಝ್ ಉಡುಪಿ, ಕೋಶಾಧಿಕಾರಿ ನಝೀರ್ ಸಾಸ್ತಾನ, ಬ್ರಹ್ಮಾವರ ಸೆಕ್ಟರ್ ಅಧ್ಯಕ್ಷ ಶಂಶುದ್ದೀನ್ ರಂಗನಕೆರೆ, ಕಟಪಾಡಿ ಸೆಕ್ಟರ್ ಕಾರ್ಯದರ್ಶಿ ಸಲ್ಮಾನ್ ಮಣಿಪುರ, ಮಣಿಪಾಲ ಸೆಕ್ಟರ್ ಕಾರ್ಯದರ್ಶಿ ಅನ್ಸಾರ್ ಸಂತೋಷ್ ನಗರ, ರಫೀಕ್ ಕಟಪಾಡಿ, ಸೈಯ್ಯೆದ್ ಅಸ್ರಾರ್ ತಂಙಳ್ ಹೂಡೆ, ಫಾರೂಕ್ ಪಿ.ಕೆ. ದೊಡ್ಡಣಗುಡ್ಡೆ ಉಪಸ್ಥಿತರಿದ್ದರು.
ಡಿವಿಷನ್ ಪ್ರಧಾನ ಕಾರ್ಯದರ್ಶಿ ಸಿದ್ದೀಕ್ ಸಂತೋಷ್ ನಗರ ಸ್ವಾಗತಿಸಿದರು. ಜಿಲ್ಲಾ ಕಾರ್ಯದರ್ಶಿ ನಾಸೀರ್ ಭದ್ರಗಿರಿ ವಂದಿಸಿದರು. ಡಿವಿಷನ್ ಹೆಲ್ಪ್ಲೈನ್ ಕನ್ವೀನರ್ ಆಸೀಫ್ ಸರಕಾರಿಗುಡ್ಡೆ ಕಾರ್ಯಕ್ರಮ ನಿರೂಪಿಸಿದರು.