×
Ad

ಕಾಪು: ವೈದ್ಯ, ಪೊಲೀಸರು ಸಹಿತ 17 ಮಂದಿಗೆ ಕೊರೋನ ಪಾಸಿಟಿವ್

Update: 2020-07-18 20:47 IST

ಕಾಪು, ಜು.18: ಕಾಪು ತಾಲೂಕಿನಲ್ಲಿ ಶನಿವಾರ ವೈದ್ಯರು ಹಾಗೂ ಪೊಲೀಸ್ ಸಿಬ್ಬಂದಿ ಸೇರಿದಂತೆ ಒಟ್ಟು 17 ಮಂದಿಗೆ ಸೋಂಕು ಕಾಣಿಸಿಕೊಂಡಿದೆ. ಕಾಪು ಠಾಣೆಯ ಮತ್ತೆ ನಾಲ್ವರು ಪೊಲೀಸರಿಗೆ ಸೋಂಕು ದೃಢವಾಗಿದ್ದು, ಠಾಣೆ ಎಎಸೈ ಸೇರಿದಂತೆ 9 ಜನರಿಗೆ ಸೋಂಕು ತಗುಲಿದಂತಾಗಿದೆ. ಪಡುಬಿದ್ರಿಯ ಕಾರ್ಕಳ ರಸ್ತೆಯ ವೈದ್ಯರೊಬ್ಬರಿಗೆ ಕೊರೋನ ಸೋಂಕು ತಗುಲಿದ್ದು, ಅವರ ಪತ್ನಿಗೂ ಸೋಂಕು ದೃಢಪಟ್ಟಿದೆ. ಇಬ್ಬರೂ ಈಗಾಗಲೇ ಸ್ವಯಂಪ್ರೇರಣೆಯಿಂದ ಉಡುಪಿ ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ವೈದ್ಯರ ಚಿಕಿತ್ಸಾಲಯ ಮತ್ತು ಮನೆಯನ್ನು ಸೀಲ್‌ಡೌನ್ ಮಾಡಲಾಗಿದೆ.

ನಡ್ಸಾಲು-ಕನ್ನಂಗಾರಿನ ಯುವಕ, ಹೆಜಮಾಡಿ ಕೋಡಿ ರಸ್ತೆಯ ದಂಪತಿಗೂ ಪ್ರಾಥಮಿಕ ಸಂಪರ್ಕದಿಂದ ಸೋಂಕು ಕಾಣಿಸಿಕೊಂಡಿದೆ. ಅವರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದಂತೆ ಪಿಲಾರು, ಮಜೂರು, ಕುಂಜಾರುಗಿರಿ ಬಿಳಿಯಾರು, ಉಚ್ಚಿಲ, ಕಾಪು, ಕುರ್ಕಾಲು, ಕಟಪಾಡಿಗಳಲ್ಲಿ ಪಾಸಿಟಿವ್ ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News