ಕಾಪು ಪೊಲೀಸ್ ಠಾಣೆಯ ಮತ್ತೆ ನಾಲ್ಕು ಮಂದಿ ಪೊಲೀಸರಿಗೆ ಕೊರೋನ ಪಾಸಿಟಿವ್
Update: 2020-07-18 21:48 IST
ಕಾಪು,ಜು.18: ಕಾಪು ಪೊಲೀಸ್ ಠಾಣೆಯ ಮತ್ತೆ ನಾಲ್ಕು ಮಂದಿ ಪೊಲೀಸರಿಗೆ ಕೊರೋನ ಸೋಂಕು ದೃಢಪಟ್ಟಿದೆ. ಶನಿವಾರ ಇಬ್ಬರು ಹೆಡ್ ಕಾನ್ಸ್ಟೇಬಲ್ ಮತ್ತು ಇಬ್ಬರು ಕಾನ್ಸ್ಟೇಬಲ್ ಗಳಿಗೆ ಕೋರೋನ ಸೋಂಕು ಇರೋದು ವರದಿಯಾಗಿದೆ.
ಒಟ್ಟು ಇಲ್ಲಿವರೆಗೆ ಈ ಠಾಣೆಯ ಒಬ್ಬರು ಎ ಎಸ್ ಐ, ಐವರು ಹೆಡ್ ಕಾನ್ಸ್ಟೇಬಲ್ ಮತ್ತು 3 ಕಾನ್ಸ್ಟೇಬಲ್ ಸಹಿತ ಒಟ್ಟು 9 ಪೊಲೀಸರಿಗೆ ಪಾಸಿಟಿವ್ ಬಂದಿದೆ.
ಈಗಾಗಲೇ ಸ್ಟೇಷನ್ ಸೀಲ್ ಡೌನ್ ಮಾಡಲಾಗಿದೆ. ಉಡುಪಿಯಲ್ಲಿ ಅತೀ ಹೆಚ್ಚು ಪಾಸಿಟಿವ್ ಇರುವ ಸ್ಟೇಷನ್ ಇದಾಗಿದೆ