×
Ad

ಮಂಗಳೂರು: ಕೊರೋನಕ್ಕೆ ಬಲಿಯಾದ ಮೊದಲ ಕ್ರೈಸ್ತ ವ್ಯಕ್ತಿಯ ಅಂತ್ಯಕ್ರಿಯೆ

Update: 2020-07-19 10:39 IST

ಮಂಗಳೂರು, ಜು.19: ಅವಿಭಜಿತ ದ.ಕ. ಜಿಲ್ಲೆ ಸೇರಿದಂತೆ ಮಂಗಳೂರು ಕ್ರೈಸ್ತ ಧರ್ಮಪ್ರಾಂತದಲ್ಲಿ ಕೊರೋನ ವೈರಸ್ ಸೋಂಕಿಗೆ ಬಲಿಯಾದ ಪ್ರಥಮ ಕ್ರೈಸ್ತ ವ್ಯಕ್ತಿಯ ಅಂತ್ಯಕ್ರಿಯೆ ಶನಿವಾರ ಕುಲಶೇಖರ ಸಮೀಪದ ಕೋರ್ಡೆಲ್ ಚರ್ಚ್ ಆವರಣದಲ್ಲಿ ನೆರವೇರಿತು. 

ಸುಮಾರು 67 ವರ್ಷ  ಪ್ರಾಯದ ಕುಲಶೇಖರ -ಶಕ್ತಿನಗರ ನಿವಾಸಿ ನಿನ್ನೆ ಕೊನೆಯುಸಿರೆಳೆದಿದ್ದರು. ಮಂಗಳೂರು ಬಿಷಪ್ ಡಾ. ಪೀಟರ್ ಪೌಲ್ ಸಲ್ದಾನ ಅವರ ಮಾರ್ಗದರ್ಶನದಲ್ಲಿ ಕ್ರೈಸ್ತ ಸಮುದಾಯದ ಪ್ರಮುಖರಾದ ರಾಯ್ ಕ್ಯಾಸ್ಟಲಿನೊ ಮತ್ತು ಲೂವಿ ಪಿಂಟೋ ನೇತೃತ್ವದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News