ಆಸ್ಟ್ರೊ ಮೋಹನ್‌ಗೆ ಗೌರವ ಫೆಲೋಶಿಪ್
Update: 2020-07-19 18:23 IST
ಉಡುಪಿ, ಜು.19: ಅಮೆರಿಕದ ಯುನೈಟೆಡ್ ಸ್ಟೇಟ್ಸ್ ಫೋಟೋಗ್ರಾಫರ್ಸ್ ಅಲಿಯನ್ಸ್ ಸಂಸ್ಥೆಯು ಹಿರಿಯ ಪತ್ರಿಕಾ ಛಾಯಾಗ್ರಾಹಕ ಆಸ್ಟ್ರೊ ಮೋಹನ್ ಅವರಿಗೆ 2020 ಸಾಲಿನ ಗೌರವ ಫೆಲೋಶಿಪ್ ನೀಡಿ ಗೌರವಿಸಿದೆ.
ಎರಡು ವರ್ಷಗಳ ಹಿಂದೆ ಅಮೆರಿಕಾದ ಇಮೇಜ್ ಕೊಲೀಗ್ ಸೊಸೈಟಿಯಿಂದ ಮಾಸ್ಟರ್ ಪದವಿ ಪಡೆದಿದ್ದ ಆಸ್ಟ್ರೊ ಮೋಹನ್ ಗೆ ಈ ಗೌರವ ದೊರೆತಿದೆ. ಆಸ್ಟ್ರೊ ಮೋಹನ್ ಅವರು ತಮ್ಮ ಛಾಯಾಚಿತ್ರ ಪತ್ರಿಕೋದ್ಯಮದ ರಜತ ಸಂಭ್ರಮವನ್ನು ಬೆಂಗಳೂರಿನ ಎನ್ ಎಂ ಕೆ ಆರ್ ವಿ ಕಾಲೇಜಿನಲ್ಲಿ ಚಿತ್ರ ಪ್ರದರ್ಶನ ಮತ್ತು ತರಬೇತಿ ಮೂಲಕ ಆಚರಿಸಿದ್ದರು.