×
Ad

ಸಾಲಿಹಾತ್ ಶಾಲೆಯಲ್ಲಿ ಶಿಕ್ಷಕಿಯರ ತರಬೇತಿ ಕಾರ್ಯಗಾರ

Update: 2020-07-19 18:24 IST

ಉಡುಪಿ, ಜು.19: ತೋನ್ಸೆ -ಹೂಡೆಯ ಸಾಲಿಹಾತ್ ಆಂಗ್ಲ ಮಾಧ್ಯಮ ಶಾಲಾ ಶಿಕ್ಷಕಿಯರಿಗಾಗಿ ಎರಡು ದಿನಗಳ ತರಬೇತಿ ಕಾರ್ಯಗಾರ ಇತ್ತೀಚೆಗೆ ನಡೆಯಿತು.

ಕಾರ್ಯಗಾರದಲ್ಲಿ ಪ್ರಮುಖ ಸಂಪನ್ಮೂಲ ವ್ಯಕ್ತಿಯಾಗಿ ರಾಷ್ಟ್ರೀಯ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಕುದಿ ವಸಂತಕುಮಾರ ಶೆಟ್ಟಿ ಮಾತನಾಡಿ, ಅಧ್ಯಾಪಕ ವಿದ್ಯಾರ್ಥಿಗಳ ಗ್ರಹಿಕೆ ಸಾಮರ್ಥ್ಯಕ್ಕಾನುಸಾರವಾಗಿ ತನ್ನ ಬೋಧನಾಕ್ರಮದಲ್ಲಿ ಸುಧಾರಿಸಿಕೊಂಡು ಬೋಧಿಸಿದಾಗ ಮಾತ್ರ ಪಠ್ಯ ಪುಸ್ತಕ ವಿಷಯವನ್ನು ಮಕ್ಕಳಿಗೆ ವರ್ಗಾಯಿಸಲು ಸಾಧ್ಯ ಎಂದರು.

ಸಂಪನ್ಮೂಲ ವ್ಯಕ್ತಿ ರೊಕಿ ಡಿಸೋಜ ಇಂಗ್ಲೀಷ್ ವ್ಯಾಕರಣದ ಬಗ್ಗೆ ವಿವರವಾಗಿ ಬೋಧಿಸಿದರು. ಸಾಲಿಹಾತ್ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಅಸ್ಲಾಂ ಹೈಕಾಡಿ, ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕಿಯರಾದ ಲವಿನಾ ಕ್ಲಾರಾ, ಅಲ್ಪೀಯಾ ಭಾನು ಉಪಸ್ಥಿತರಿದ್ದರು. ಪ್ರೌಢಶಾಲಾ ವಿಭಾಗದ ಮುಖ್ಯ ಶಿಕ್ಷಕಿ ಸುನಂದಾ ಕಾರ್ಯಕ್ರಮ ನಿರ್ವಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News