×
Ad

ಕೋವಿಡ್-19: ಶಿಕ್ಷಣ ವ್ಯವಸ್ಥೆ ಕುರಿತ ಸಲಹೆ ನೀಡಿದ ಜಮಾಅತ್ ಎ-ಇಸ್ಲಾಮೀ ಹಿಂದ್

Update: 2020-07-19 20:15 IST

ಮಂಗಳೂರು, ಜು.19: ರಾಜ್ಯಾದ್ಯಂತ ಕೋವಿಡ್-19 ವಿಸ್ತರಿಸುತ್ತಿರುವ ನಡುವೆಯೇ ಶಿಕ್ಷಣ ಸಂಸ್ಥೆಗಳನ್ನು ಸುಗಮವಾಗಿ ನಡೆಸಲು ರಾಜ್ಯ ಸರಕಾರ ಅವಕಾಶ ನೀಡಿದೆ. ಜಮಾಅತ್ ಎ ಇಸ್ಲಾಮಿ ಹಿಂದ್ ಕನಾಟಕ (ಶಿಕ್ಷಣ ವಿಭಾಗ) ರಾಜ್ಯ ಕಾರ್ಯದರ್ಶಿ ಹಾಫಿಝ್ ಮುಹಮ್ಮದ್ ಅಸ್ಲಮ್ ಶಿಕ್ಷಣ ಸಚಿವರಿಗೆ ಪತ್ರ ಬರೆದು ಕೆಲವೊಂದು ಸಲಹೆ ನೀಡಿದ್ದಾರೆ.

‘ಖಾಸಗಿ ಶಾಲಾ ಶಿಕ್ಷಕರಿಗೆ ‘ಪಿಎಂ ಕೇರ್ಸ್ ಫಂಡ್’/ ಸಂಬಂಧಿತ ಯೋಜನೆಯಿಂದ ಸರಕಾರ ಸಹಾಯ ಮಾಡಬೇಕು. ಪ್ರಾವಿಡೆಂಟ್ ಫಂಡ್ (ಪಿಎಫ್) ಇಲಾಖೆ/ ಇಪಿಎಫ್‌ಒ ಖಾಸಗಿ ಶಾಲೆಗಳ ಶಿಕ್ಷಕರಿಗೆ ಮೂರು ವರ್ಷಗಳ ಕಾಲ ಬಡ್ಡಿರಹಿತ ಸಾಲ ನೀಡಬೇಕು. ಎಂಎಸ್‌ಎಂಇ ಸಾಲದ ಮಾರ್ಗದಲ್ಲಿ ಯೋಜನೆ ರೂಪಿಸಿರುವ ಕಾರಣ ಸರಕಾರವು ಸಣ್ಣ ಖಾಸಗಿ ಶಾಲೆಗಳಿಗೆ ಬಡ್ಡಿರಹಿತ ಸಾಲ ನೀಡಬೇಕು’ ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

‘ಸರಕಾರ ಹೋಮ್ ಸ್ಕೂಲಿಂಗ್ ವ್ಯವಸ್ಥೆ ರೂಪಿಸಬೇಕು. ಅದನ್ನು ನಿಯಂತ್ರಿಸುತ್ತ ಸುಗಮಗೊಳಿಸಬೇಕು. ಕೇಂದ್ರ ಸರಕಾರದ ಸಹಕಾರದೊಂದಿಗೆ ರಾಜ್ಯ ಸರಕಾರವು ಆನ್‌ಲೈನ್ ಬೋಧನಾ ವ್ಯವಸ್ಥೆ ಅಭಿವೃದ್ಧಿಪಡಿಸಬೇಕು. ಸ್ಮಾರ್ಟ್‌ಫೋನ್ ಹೊಂದಿಲ್ಲದ ವಿದ್ಯಾರ್ಥಿಗಳಿಗೆ ಸರಕಾರವು ಸೀಮಿತ ಡೇಟಾ ಸೌಲಭ್ಯ ಒದಗಿಸಬೇಕು. ಅಭಿವೃದ್ಧಿ ಉದ್ದೇಶಕ್ಕಾಗಿ ಬಳಸಲಾಗುತ್ತಿರುವ ಸಿಎಸ್‌ಆರ್ ನಿಧಿಯ ಶೇ.60ನ್ನು ಕೋವಿಡ್ ಪರಿಸ್ಥಿತಿಯಲ್ಲಿ ರಾಜ್ಯಾದ್ಯಂತ ಶಿಕ್ಷಣ ಸಂಸ್ಥೆಗಳು ಮತ್ತು ಶಿಕ್ಷಣ ವ್ಯವಸ್ಥೆಗೆ ಮೀಸಲಿಡಬೇಕು’ ಎಂದು ಜಮಾಅತ್ ಎ ಇಸ್ಲಾಮಿ ಹಿಂದ್‌ನ ರಾಜ್ಯ ಕಾರ್ಯದರ್ಶಿ ಹಾಫಿಝ್ ಶಿಕ್ಷಣ ಸಚಿವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News