ಮಲ್ಪೆ: ಮೀನುಗಾರಿಕಾ ಬೋಟುಗಳ ಬ್ಯಾಟರಿ ಕಳವು

Update: 2020-07-19 15:25 GMT

ಮಲ್ಪೆ, ಜು.19: ಮಲ್ಪೆ ಬಂದರಿನಲ್ಲಿ ಲಂಗಾರು ಹಾಕಿದ್ದ ಎರಡು ಮೀನು ಗಾರಿಕಾ ಬೋಟುಗಳ ಬ್ಯಾಟರಿಗಳನ್ನು ಕಳವು ಮಾಡಿರುವ ಘಟನೆ ನಡೆದಿದೆ. ಪಡುತೋನ್ಸೆ ಬೇಂಗ್ರೆಯ ಧರ್ಮರಾಜ್ ಸುವರ್ಣ ಎಂಬವರ ತಿರುಮಲ ಎಂಬ ಮೀನುಗಾರಿಕಾ ಬೋಟಿನ ಕ್ಯಾಬಿನ್ ಒಳಗಡೆ ಇರಿಸಿದ್ದ 22ಸಾವಿರ ರೂ. ಮೌಲ್ಯದ ಎರಡು ಬ್ಯಾಟರಿಗಳನ್ನು ಜು.17ರ ಮಧ್ಯಾಹ್ನದಿಂದ ಜು.18ರ ಬೆಳಗ್ಗಿನ ಮಧ್ಯಾವಧಿಯಲ್ಲಿ ಕಳವು ಮಾಡಲಾಗಿದೆ.

ಅದೇ ರೀತಿ ವಾಸುಕೀನಗರದ ದಯೇಂದ್ರ ಜಿ.ಬಂಗೇರ ಎಂಬವರ ಜೈ ಹನುಮ ಮೀನುಗಾರಿಕೆ ಬೋಟಿನ ಕ್ಯಾಬಿನ್ ಒಳಗಡೆ ಇರಿಸಿದ 24ಸಾವಿರ ರೂ. ಮೌಲ್ಯದ ಎರಡು ಬ್ಯಾಟರಿಗಳನ್ನು ಕಳ್ಳರು ಜು.14ರಿಂದ 16ರ ಮಧ್ಯಾವಧಿಯಲ್ಲಿ ಕಳವು ಮಾಡಿದ್ದಾರೆ. ಈ ಬಗ್ಗೆ ಮಲ್ಪೆಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News