ಉಳ್ಳಾಲ ನಗರ ಸಭಾ ವ್ಯಾಪ್ತಿಯಲ್ಲಿ ರವಿವಾರ ಮೂವರಿಗೆ ಕೊರೋನ ಪಾಸಿಟಿವ್
ಉಳ್ಳಾಲ: ಇಲ್ಲಿನ ನಗರ ಸಭಾ ವ್ಯಾಪ್ತಿಯಲ್ಲಿ ರವಿವಾರ ಓರ್ವ ಮಹಿಳೆ ಸೇರಿದಂತೆ ಮೂವರಿಗೆ ಕೊರೋನ ಸೋಂಕು ದೃಢಪಟ್ಟಿದೆ. ಕೋಡಿಯಲ್ಲಿ 33 ವರ್ಷದ ಮಹಿಳೆ, ಒಂಭತ್ತು ಕೆರೆಯಲ್ಲಿ 66 ವರ್ಷದ ವೃದ್ಧ, ಮೊಗವೀರ ಪಟ್ನದಲ್ಲಿ 47 ವರ್ಷದ ಪುರುಷನಿಗೆ ಸೋಂಕು ದೃಢಪಟ್ಟಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಕೋಟೆಕಾರು: ಕೋಟೆಕಾರು ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಓರ್ವ ಪುರುಷ ಸೇರಿದಂತೆ ಆಸ್ಪತ್ರೆಯಲ್ಲಿ ದಾಖಲಾಗಿರುವ 55, 23 ವರ್ಷದ ಮಹಿಳೆಯರಿಬ್ಬರಿಗೆ ಕೊರೋನ ಸೋಂಕು ದೃಢಪಟ್ಟಿದೆ.
ಬೆಳ್ಮ ಗ್ರಾಮದಲ್ಲಿ 45 ವರ್ಷದ ಮಹಿಳೆ, ದೇರಳಕಟ್ಟೆಯಲ್ಲಿ 34 ಮತ್ತು 33ವರ್ಷದ ಇಬ್ಬರು ಪುರುಷರು, ಮುನ್ನೂರು ಗ್ರಾಮದ ಕುತ್ತಾರ್ ನಲ್ಲಿ 21 ಮತ್ತು 23 ವರ್ಷದ ಇಬ್ಬರು ಯುವತಿಯರಿಗೆ ಸೋಂಕು ದೃಢಪಟ್ಟಿದೆ
ಕೊಣಾಜೆಯಲ್ಲಿ ಕೆಎಸ್ಆರ್ ಪಿ ಪೊಲೀಸರೊಬ್ಬರು ಸೇರಿದಂತೆ 37 ವರ್ಷದ ಪುರುಷ, 33ವರ್ಷದ ಪುರುಷ, ಮದ್ಪಾಡಿಯಲ್ಲಿ 31 ವರ್ಷದ ಮಹಿಳೆ, ಅಸೈಗೋಳಿಯಲ್ಲಿ 37 ವರ್ಷದ ಪುರುಷನಿಗೆ ಕೊರೋನ ಪಾಸಿಟಿವ್ ವರದಿ ಬಂದಿದೆ.
ಮಂಜನಾಡಿ ಗ್ರಾಮದ ಕಲ್ಕಟ್ಟ ಎಂಬಲ್ಲಿ 18 ವರ್ಷದ ಯುವತಿಗೆ ಸೋಂಕು ದೃಢಪಟ್ಟಿದೆ ಎಂದು ಆರೋಗ್ಯ ಇಲಾಖೆ ವರದಿ ತಿಳಿಸಿದೆ.
ಜೂ.23 ರಿಂದ ಉಳ್ಳಾಲ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಒಟ್ಟು 379 ಮಂದಿಗೆ ಸೋಂಕು ದೃಢಪಟ್ಟಿದೆ.