ಗೂಡಿನಬಳಿ ಎಸ್ಕೆಎಸ್ಸೆಸ್ಸೆಫ್ ಶಾಖೆಯ ಅಧ್ಯಕ್ಷ ಲತೀಫ್ ಖಾನ್ ನಿಧನ

Update: 2020-07-20 07:37 GMT

ಮಂಗಳೂರು, ಜು.20: ಗೂಡಿನಬಳಿ ಎಸ್ಕೆಎಸ್ಸೆಸ್ಸೆಫ್ ಶಾಖಾ ಅಧ್ಯಕ್ಷ ಲತೀಫ್ ಖಾನ್ (45) ಅಲ್ಪ ಕಾಲದ ಅನಾರೋಗ್ಯದಿಂದ ರವಿವಾರ ಸಂಜೆ ದೇರಳಕಟ್ಟೆ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಇವರು ಎಸ್ಕೆಎಸ್ಸೆಸ್ಸೆಫ್ ಗೂಡಿನಬಳಿ ಶಾಖೆಯ ಅಧ್ಯಕ್ಷರು, ಪಾಣೆಮಂಗಳೂರು ಕ್ಲಸ್ಟರ್ ಇದರ ಸಹಕಾರಿ ಕಾರ್ಯದರ್ಶಿ, ಬಂಟ್ವಾಳ ವಲಯ ಕೌನ್ಸಿಲರ್, ಎಸ್ಕೆಎಸ್ಸೆಸ್ಸೆಫ್ ದ.ಕ ಜಿಲ್ಲಾ ಕೌನ್ಸಿಲರಾಗಿದ್ದು, ರಾಜಕೀಯ ಕ್ಷೇತ್ರದಲ್ಲಿ ಸ್ಥಳಿಯ ಪ್ರಭಾವಿ ನಾಯಕರಾಗಿ, ಬಂಟ್ವಾಳ ನಗರಾಭಿವೃದ್ದಿ ಪ್ರಾಧಿಕಾರ (ಬುಡಾ) ಇದರ ಸದಸ್ಯರಾಗಿದ್ದರು. ಅದೇ ರೀತಿ ಸಾಮಾಜಿಕ ಕ್ಷೇತ್ರದಲ್ಲಿ ಸಮಾಜ ಸೇವಕರಾಗಿ, ಗೂಡಿನಬಳಿ ಜುಮಾ ಮಸೀದಿಯ ಆಡಳಿತ ಸಮಿತಿಯ ಸದಸ್ಯರಾಗಿದ್ದರು.

ಮೃತರು ತಾಯಿ, ಪತ್ನಿ, ಇಬ್ಬರು ಪುತ್ರರು, ಓರ್ವ ಪುತ್ರಿ, ಇಬ್ಬರು ಸಹೋದರರು ಸಹಿತ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ಸಂತಾಪ
ಲತೀಫ್ ಖಾನ್ ನಿಧನಕ್ಕೆ ಎಸ್ಕೆಎಸ್ಸೆಸ್ಸೆಫ್ ಜಿಲ್ಲಾ ಅಧ್ಯಕ್ಷ ಸೈಯ್ಯದ್ ಅಮೀರ್ ತಂಙಳ್ ಕೀನ್ಯ, ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಯಮಾನಿ, ಕೇಂದ್ರ ಸಮಿತಿ ಕಾರ್ಯದರ್ಶಿ ಕಾಸೀಂ ದಾರಿಮಿ ಸವಣೂರು, ಎಸ್ಕೆಎಸ್ಸೆಸ್ಸೆಫ್ ಬಂಟ್ವಾಳ ವಲಯ ಅಧ್ಯಕ್ಷ ಇರ್ಷಾದ್ ದಾರಿಮಿ ಮಿತ್ತಬೈಲು, ಪ್ರಧಾನ ಕಾರ್ಯದರ್ಶಿ ಹನೀಫ್ ಮುಸ್ಲಿಯಾರ್ ತಾಳಿಪಡ್ಪು, ಕೋಶಾಧಿಕಾರಿ ಟಿ.ಪಿ ಜಬ್ಬಾರ್ ಬೋಳಿಯಾರ್, ಸಂಘಟನಾ ಕಾರ್ಯದರ್ಶಿ ಸವಾದ್ ಗೂಡಿನಬಳಿ, ವಿಖಾಯ ಕೇಂದ್ರ ಸಮಿತಿಯ ವೈಸ್ ಚಯರ್ಮ್ಯಾನ್ ಬಶೀರ್ ಮಜಲು, ಜಿಲ್ಲಾ ಉಪಾಧ್ಯಕ್ಷ ಅಬುಸ್ವಾಲಿಹ್ ಫೈಝೀ, ಸಿದ್ದಿಕ್ ಅಬ್ದುಲ್ ಖಾದರ್ ಬಂಟ್ವಾಳ, ವಿಖಾಯ ಜಿಲ್ಲಾ ಕೋ ಆರ್ಡಿನೇಟರ್ ಮುಸ್ತಫ ಕಟ್ಟದಪಡ್ಪು, ವಿಖಾಯ ವಲಯ ಚಯರ್ಮ್ಯಾನ್ ಖಾದರ್ ಮುಸ್ಲಿಯಾರ್, ಕನ್ವೀನರ್ ಖಾಲಿದ್, ಸಹಚಾರಿ ಕನ್ವೀನರ್ ನಾಸೀರ್ ಜಿ.ಕೆ, ವಿಖಾಯ ಬ್ಲಡ್ ಹೆಲ್ಪ್ ಲೈನ್ ವಲಯ ಉಸ್ತುವಾರಿ ಶಾಕೀರ್ ಮಿತ್ತಬೈಲು ಹಾಗೂ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News