×
Ad

ಕೋವಿಡ್ ನಿಂದ ಮೃತಪಟ್ಟ ವ್ಯಕ್ತಿಗಳಿಬ್ಬರ ಅಂತ್ಯಕ್ರಿಯೆ ನಡೆಸಿದ ದ.ಕ ಜಿಲ್ಲಾ ಎಸ್ಸೆಸ್ಸೆಫ್

Update: 2020-07-20 14:43 IST

ಮಂಗಳೂರು, ಜು.20: ಕೊರೋನ ಸೋಂಕಿನಿಂದ ಮೃತಪಟ್ಟ ಇಬ್ಬರ ಅಂತ್ಯಸಂಸ್ಕಾರವನ್ನು ಆರೋಗ್ಯ ಇಲಾಖೆಯ ಮಾರ್ಗಸೂಚಿ ಪ್ರಕಾರ‌ ದ.ಕ ಜಿಲ್ಲಾ ಎಸ್ಸೆಸ್ಸೆಫ್ ತಂಡ ನೆರವೇರಿಸಿತು.

ಉಸಿರಾಟದ ತೊಂದರೆಯಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಕೆಸಿರೋಡ್ ತಲಪಾಡಿ ನಿವಾಸಿ ಮತ್ತು ಸುರತ್ಕಲ್ ಬಾಯರ್ಪಳಿಕೆಯ ವ್ಯಕ್ತಿ ಮೃತಪಟ್ಟಿದ್ದು, ಬಳಿಕ ನಡೆಸಿದ ಕೊರೋನ ಪರೀಕ್ಷೆಯಲ್ಲಿ ಸೋಂಕು ದೃಢಪಟ್ಟಿತ್ತು. ಈ ಹಿನ್ನೆಲೆಯಲ್ಲಿ ಜಿಲ್ಲಾ ಆರೋಗ್ಯ ಇಲಾಖೆಯ ಮಾರ್ಗಸೂಚಿ ಪ್ರಕಾರ ಪ್ರತ್ಯೇಕ ತರಗತಿ ಪಡೆದ ತೌಸೀಫ್ ಸ‌ಅದಿ ಹರೇಕಳ ರವರ ನೇತೃತ್ವದ‌ ತಂಡ ಕೆ‌.ಸಿ.ರೋಡ್ ಜುಮಾ ಮಸೀದಿಯ ದಫನ ಭೂಮಿಯಲ್ಲಿ ಮತ್ತು ಸುರತ್ಕಲ್ ಬಾಯರ್ಪಳಿಕೆ 62ನೇ ತೋಕುರು ದಫನ ಭೂಮಿಯಲ್ಲಿ ಜಿಲ್ಲಾ ನಾಯಕ‌ ನವಾಝ್ ಸಖಾಫಿ ಅಡ್ಯಾರ್ ರವರ ನೇತೃತ್ವದ ತಂಡ ಧಪನ ಕಾರ್ಯದ ಧಾರ್ಮಿಕ ವಿಧಿ ವಿಧಾನಗಳನ್ನು ಅನುಸರಿಸಿ ಅಂತ್ಯಕ್ರಿಯೆ ನಡೆಸಿತು.

ದ.ಕ ಜಿಲ್ಲಾ ಎಸ್ಸೆಸ್ಸೆಫ್ ಅಧ್ಯಕ್ಷ ಇಬ್ರಾಹಿಂ ಸಖಾಫಿ ಸೆರ್ಕಳ ದುಆ ನೆರವೇರಿಸಿದರು. ಜಿಲ್ಲಾ ನಾಯಕರಾದ ಆರಿಫ್ ಝುಹ್ರಿ ಮುಕ್ಕ, ಕೆರೀಂ ಕದ್ಕಾರ್, ವೆಸ್ಟ್ ಝೋನ್ ಕಾರ್ಯದರ್ಶಿ ಹೈದರ್ ಕಾಟಿಪಳ್ಳ, ಝೋನ್ ಕ್ಯಾಂಪಸ್ ಕಾರ್ಯದರ್ಶಿ ಇಲ್ಯಾಸ್ ಪೊಟ್ಟೊಳಿಕೆ, ಬ್ಲಡ್ ಸೈಬೊ ಉಳ್ಳಾಲ ಉಸ್ತುವಾರಿ ಅಲ್ತಾಫ್ ಶಾಂತಿಬಾಗ್, ಫೈಝಲ್ ಫರೀದ್ ನಗರ, ಹಮೀದ್ ತಲಪಾಡಿ, ಹಕೀಂ ಪೂಮಣ್ಣು, ನೌಫಲ್ ಫರೀದ್ ನಗರ, ಮುನೀರ್ ಬೈತಾರು, ಅಬೂಸ್ವಾಲಿಹ್ ಫಜೀರ್, ಇಸ್ಮಾಯಿಲ್ ತಲಪಾಡಿ, ಜಬ್ಬಾರ್ ಕಣ್ಣೂರು, ಹುಸೈನ್ ಜೋಕಟ್ಟೆ, ತೌಸೀಫ್ ಬದ್ರಿಯ ನಗರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದರು.

ಅಂತ್ಯಕ್ರಿಯೆಗೆ ಮಸೀದಿಯ ಆಡಳಿತ ಸಮಿತಿ, ಆರೋಗ್ಯ ಇಲಾಖೆಯ ಅಧಿಕಾರಿಗಳು, ಎಸ್.ವೈ.ಎಸ್, ಎಸ್ಸೆಸ್ಸೆಫ್ ನಾಯಕರ ಮತ್ತು ಕಾರ್ಯಕರ್ತರು ಸಹಕಾರ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News