×
Ad

ಅಳಕೆ: ನಾಗರಪಂಚಮಿ ಆಚರಣೆ ರದ್ಧು; ದೇಗುಲಕ್ಕೆ ಭಕ್ತರ ಪ್ರವೇಶ ನಿರ್ಬಂಧ

Update: 2020-07-20 17:23 IST

ಮಂಗಳೂರು, ಜು.20: ನಗರದ ಅಳಕೆ ಶ್ರೀ ನಾಗಬ್ರಹ್ಮ ದೇವಸ್ಥಾನ ಮತ್ತು ಕಲ್ಲುರ್ಟಿ ಪಂಜುರ್ಲಿ ದೈವಸ್ಥಾನದಲ್ಲಿ ಈ ಬಾರಿಯ ನಾಗರಪಂಚಮಿ ಆಚರಣೆಯನ್ನು ರದ್ದುಗೊಳಿಸಲಾಗಿದ್ದು, ಅಂದು ಭಕ್ತರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ.

ಶ್ರೀ ಕ್ಷೇತ್ರದಲ್ಲಿ ಜು.25ರಂದು ಜರುಗಲಿರುವ ನಾಗರಪಂಚಮಿ ಆಚರಣೆಯನ್ನು ಕೊರೋನ ವೈರಾಣು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಮತ್ತು ದ.ಕ.-ಉಡುಪಿ ಜಿಲ್ಲೆ ಸೇರಿದಂತೆ ಇನ್ನಿತರ ಕಡೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಆಗಮಿಸುವ ಭಕ್ತರಿಂದ ಸುರಕ್ಷಿತ ಅಂತರ ಕಾಯ್ದುಕೊಳ್ಳುವುದು ಕಷ್ಟಸಾಧ್ಯವೆಂದು ಪರಿಗಣಿಸಿ ಈ ಭಾರಿಯ ನಾಗರಪಂಚಮಿ ಉತ್ಸವವನ್ನು ರದ್ಧುಗೊಳಿಸಲಾಗಿದೆ. ಭಕ್ತರು ದೇವರಿಗೆ ಅರ್ಪಿಸಲು ಹಾಲು, ಸಿಯಾಳ, ಹಣ್ಣುಕಾಯಿ ಇತ್ಯಾದಿ ವಸ್ತುಗಳನ್ನು ತರಲು ಅವಕಾಶವಿರುವುದಿಲ್ಲ ಮತ್ತು ತೀರ್ಥ, ಸೇವಾಪ್ರಸಾದ, ಅನ್ನ ಸಂತರ್ಪಣೆ ಸೇವೆಗಳು ಇರುವುದಿಲ್ಲ ಎಂದು ಶ್ರೀ ಕ್ಷೇತ್ರದ ಆಡಳಿತ ಮಂಡಳಿಯ ಪ್ರಕಟನೆ ತಿಳಿಸಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News