×
Ad

ಪಡುಪೆರಾರ ಗ್ರಾಪಂ ಅಧ್ಯಕ್ಷರಿಗೆ ಸಾವಿರ ರೂ. ದಂಡ

Update: 2020-07-20 17:27 IST

ಮಂಗಳೂರು, ಜು.20: ಕೋವಿಡ್-ಲಾಕ್‌ಡೌನ್‌ನ ನೆಪವೊಡ್ಡಿ 2019-20ರ ಸಾಲಿನ ದ್ವಿತೀಯ ಹಂತದ ಗ್ರಾಮಸಭೆ ನಡೆಸದೆ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಕಾಯ್ದೆ ಉಲ್ಲಂಘಿಸಿದ ಪಡುಪೆರಾರ ಗ್ರಾಪಂ ಅಧ್ಯಕ್ಷರ ವಿರುದ್ಧ ದ.ಕ.ಜಿಪಂ 1,000 ರೂ ದಂಡ ವಿಧಿಸಿ, ನೋಟಿಸು ಜಾರಿಗೊಳಿಸಿದೆ.

2019ರ ನವಂಬರ್ 29ರಂದು ಪಡುಪೆರಾರ ಗ್ರಾಪಂನ 2019-20ರ ಸಾಲಿನ ಗ್ರಾಮ ಸಭೆ ನಡೆಯಬೇಕಿದ್ದರೂ ಸಭೆ ನಡೆದಿಲ್ಲ. ಕೋವಿಡ್ ಲಾಕ್‌ಡೌನ್ ಹಿನ್ನೆಲೆಯಲ್ಲಿ ಸಭೆ ನಡೆದಿಲ್ಲ ಎಂದು ಪಂಚಾಯತ್ ಉತ್ತರ ನೀಡಿತ್ತು. ಆದರೆ 2020ರ ಮಾರ್ಚ್ 23ರವರೆಗೆ ಲಾಕ್‌ಡೌನ್ ಜಾರಿಯಲ್ಲಿರಲಿಲ್ಲ. ಹಿಂದೆಯೂ ಕೆಲವು ಬಾರಿ ಗ್ರಾಮಸಭೆ ನಡೆಸದ ಅಧ್ಯಕ್ಷರು, ಕುಂಟು ನೆಪವೊಡ್ಡಿ ಗ್ರಾಮಸ್ಥರನ್ನು ಮೌನವಾಗಿಸಿದ್ದರು ಎಂದು ದೂರುದಾರರಾದ ರೋಶನ್ ಲೋಬೊ ಮತ್ತು ರೊನಾಲ್ಡ್ ರೋಡ್ರಿಗಸ್ ಆರೋಪಿಸಿದ್ದರು. ಆ ಹಿನ್ನೆಲೆಯಲ್ಲಿ ಇದೀಗ ದಂಡ ವಿಧಿಸಿ ನೋಟಿಸ್ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News