ಕೋವಿಡ್-19 ಮೃತದೇಹದ ಅಂತ್ಯಸಂಸ್ಕಾರ ಕುರಿತು ಪ್ರಾತ್ಯಕ್ಷಿಕೆ
Update: 2020-07-20 19:31 IST
ಕುಂದಾಪುರ, ಜು.20: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಕುಂದಾಪುರ ತಾಲೂಕು ಸಮಿತಿ ವತಿಯಿಂದ ಕುಂದಾಪುರ ತಾಲೂಕು ಆರೋಗ್ಯ ಇಲಾಖೆಯ ಸಹಯೋಗದೊಂದಿಗೆ ಕೋವಿಡ್-19 ಮೃತದೇಹದ ಅಂತ್ಯಸಂಸ್ಕಾರದ ಕುರಿತ ಪ್ರಾತ್ಯಕ್ಷಿಕೆ ಮತ್ತು ಮಾಹಿತಿ ಕಾರ್ಯಗಾರವು ಕುಂದಾಪುರ ಜಾಮಿಯಾ ಮಸೀದಿ ಸಭಾಂಗಣದಲ್ಲಿ ಇತ್ತೀಚೆಗೆ ಜರಗಿತು.
ಕುಂದಾಪುರ ತಾಲೂಕು ಆರೋಗ್ಯ ಅಧಿಕಾರಿ ಡಾ.ನಾಗಭೂಷಣ್ ಉಡುಪ, ಕೋವಿಡ್-19 ಕುರಿತು ಮಾಹಿತಿಯನ್ನು ನೀಡಿದರು. ಉಡುಪಿ ಆರೋಗ್ಯ ಇಲಾಖೆಯ ಕಾಯಕಲ್ಪಸಂಯೋಜಕ ಗುರುರಾಜ್, ಮೃತದೇಹದ ಅಂತ್ಯ ಸಂಸ್ಕಾರದ ಕುರಿತು ಪ್ರಾತ್ಯಕ್ಷಿಕೆಯನ್ನು ನಡೆಸಿಕೊಟ್ಟರು.
ಈ ಸಂದರ್ಭದಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಉಡುಪಿ ಜಿಲ್ಲೆ ಮೆಡಿಕಲ್ ಇಂಚಾರ್ಜ್ ಮುನೀರ್ ಕಲ್ಮಾಡಿ, ಪಾಪ್ಯುಲರ್ ಫ್ರಂಟ್ ಕುಂದಾ ಪುರ ತಾಲೂಕು ಅಧ್ಯಕ್ಷ ಆಸಿಫ್ ಕೋಟೇಶ್ವರ ಉಪಸ್ಥಿತರಿದ್ದರು. ಲಿಯಾಖತ್ ಕಂಡ್ಲೂರ್ ಕಾರ್ಯಕ್ರಮ ನಿರೂಪಿಸಿದರು.