ಬೋಟುಗಳ ಬ್ಯಾಟರಿ ಕಳವು: ಮೂವರು ಆರೋಪಿಗಳ ಬಂಧನ

Update: 2020-07-20 15:55 GMT

ಮಲ್ಪೆ, ಜು.20: ಮಲ್ಪೆ ಬಂದರಿನಲ್ಲಿ ಲಂಗಾರು ಹಾಕಿದ್ದ ಎರಡು ಮೀನು ಗಾರಿಕಾ ಬೋಟುಗಳ ಬ್ಯಾಟರಿಗಳನ್ನು ಕಳವು ಪ್ರಕರಣಕ್ಕೆ ಸಂಬಂಧಿಸಿ ಮಲ್ಪೆ ಪೊಲೀಸರು ಮೂವರು ಆರೋಪಿಗಳನ್ನು ಜು.19ರಂದು ಕಲ್ಮಾಡಿ ಜಂಕ್ಷನ್ ಬಳಿ ಬಂಧಿಸಿದ್ದಾರೆ.

ಮಲ್ಪೆ ವಿ.ಬಿ.ರಸ್ತೆಯ ಅಲ್ ಮುಹೀತ್(20), ವಡಬಾಂಡೇಶ್ವರದ ಬಲ ರಾಮ ನಗರದ ಯಾಸೀನ್(18) ಹಾಗೂ ಆದರ್ಶ್(19) ಬಂಧಿತ ಆರೋಪಿಗಳು. ಇವರು ಜು.14ರಿಂದ 18ರ ಮಧ್ಯಾವಧಿಯಲ್ಲಿ ಮಲ್ಪೆ ಬಂದರಿನಲ್ಲಿ ಲಂಗಾರು ಹಾಕಿದ್ದ ತಿರುಮಲ ಹಾಗೂ ಜೈ ಹನುಮ ಮೀನುಗಾರಿಕೆ ಬೋಟು ಗಳಲ್ಲಿದ್ದ 54ಸಾವಿರ ರೂ. ಮೌಲ್ಯದ ನಾಲ್ಕು ಬ್ಯಾಟರಿಗಳನ್ನು ಕಳವುಗೈದಿದ್ದರು.

ಬಂಧಿತರಿಂದ ಕಳವುಗೈದ ಬ್ಯಾಟರಿಗಳು ಹಾಗೂ ರಿಟ್ಜ್ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಮಲ್ಪೆ ಎಸ್ಸೈ ತಿಮ್ಮೇಶ್ ಬಿ.ಎನ್. ನೇತೃತ್ವದಲ್ಲಿ ಎಎಸ್ಸೈ ಸುಧಾಕರ ಬಿ., ಸಿಬ್ಬಂದಿಗಳಾದ ಜಯರಾಮ, ರತ್ನಾಕರ, ಶಶಿಧರ, ಪ್ರವೀಣ್, ಸಂತೋಷ್, ವಿಕ್ರಮ್ ಬೆರೆಟ್ಟೋ, ಚೇತನ್ ಪಿತ್ರೋಡಿ, ರವಿರಾಜ್, ಪಿ.ಸಿ. ಸದಾನಂದ, ಮಂಜುನಾಥ, ಮಹಾಬಲ್ ಈ ಕಾರ್ಯಾಚರಣೆ ನಡೆಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News