×
Ad

ಉಡುಪಿ ನಗರಸಭೆ ಅಧಿಕಾರಿಯ ಪತ್ನಿ, ಮಗನಿಗೂ ಕೊರೋನ ಸೋಂಕು ದೃಢ

Update: 2020-07-20 21:27 IST

ಉಡುಪಿ, ಜು.20: ವಾರದ ಹಿಂದೆ ಸೋಂಕು ಕಂಡುಬಂದಿದ್ದ ಉಡುಪಿ ನಗರಸಭೆಯ ಆರೋಗ್ಯ ಅಧಿಕಾರಿಯೊಬ್ಬರ ಗರ್ಭಿಣಿ ಪತ್ನಿ ಹಾಗೂ ಒಂಭತ್ತು ವರ್ಷದ ಮಗನಿಗೂ ಕೊರೋನ ಪಾಸಿಟಿವ್ ಎಂಬುದಾಗಿ ಇಂದು ದೃಢಪಟ್ಟಿದೆ. ಸದ್ಯ ನಗರಸಭೆ ಪರಿಸರ ಇಂಜಿನಿಯರ್ ಸೇರಿದಂತೆ ಆರೋಗ್ಯ ವಿಭಾಗದ ಸಿಬ್ಬಂದಿಗಳೆಲ್ಲ ಹೋಮ್ ಕ್ವಾರಂಟೇನ್‌ಗೆ ಒಳಗಾಗಿ ಮನೆಯಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

 ಆರೋಗ್ಯ ಅಧಿಕಾರಿಗೆ ಕೊರೋನ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಜು.14ರಂದು ನಗರಸಭೆ ಕಚೇರಿಯನ್ನು ಸೀಲ್‌ಡೌನ್ ಮಾಡಿ ಸ್ಯಾನಿಟೈಸ್ ಮಾಡಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News