×
Ad

ಪುತ್ತೂರು ಮತ್ತು ಕಡಬ ತಾಲೂಕಿನಲ್ಲಿ ಮತ್ತೆ 9 ಕೊರೋನ ಪಾಸಿಟಿವ್

Update: 2020-07-21 11:24 IST

ಪುತ್ತೂರು, ಜು.21: ನಗರ ಪೊಲೀಸ್ ಠಾಣೆಯ ಮಹಿಳಾ ಸಿಬ್ಬಂದಿ ಸೇರಿದಂತೆ ಇಬ್ಬರ ಸಹಿತ ಪುತ್ತೂರು ಮತ್ತು ಕಡಬ ತಾಲೂಕಿನಲ್ಲಿ ಮಂಗಳವಾರ ಒಟ್ಟು 9 ಕೊರೊನಾ ಪಾಸಿಟಿವ್ ಪ್ರಕರಣಗಳು ದಾಖಲಾಗಿದೆ.

ಪುತ್ತೂರು ನಗರ ಠಾಣೆಯ 35 ವರ್ಷದ ಮಹಿಳಾ ಪೊಲೀಸ್ ಸಿಬ್ಬಂದಿ ಹಾಗೂ 51 ವರ್ಷದ ಪುರುಷ ಸಿಬ್ಬಂದಿಯಲ್ಲಿ ಸೋಂಕು ದೃಢಪಟ್ಟಿದೆ.

ಉಳಿದಂತೆ ಪುತ್ತೂರು ಸರಕಾರಿ ಆಸ್ಪತ್ರೆಯ 44 ವರ್ಷ ಪ್ರಾಯದ ಮಹಿಳಾ ಸಿಬ್ಬಂದಿ, ನೆಹರೂ ನಗರ ನಿವಾಸಿ 54 ವರ್ಷದ ಪುರುಷ, ಮಂಗಳೂರು ವೆನ್ಲಾಕ್ ಆಸ್ಪತ್ರೆಯಲ್ಲಿ ದಾಖಲಾಗಿರುವ ಬಜತ್ತೂರು ಗ್ರಾಮದ 63 ವರ್ಷ ಪ್ರಾಯದ ಮಹಿಳೆ, ಈಶ್ವರಮಂಗಲ ನಿವಾಸಿ 54 ವರ್ಷದ ಪುರುಷ, ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿರುವ ಚಿಕ್ಕಮುಡ್ನೂರು ಗ್ರಾಮದ 40 ವರ್ಷದ ಪುರುಷರಲ್ಲಿ ಕೊರೋನ ಸೋಂಕು ದೃಢಪಟ್ಟಿದೆ.

ಕಡಬ ತಾಲೂಕು

ಕಡಬ ತಾಲೂಕಿನ ಆಲಂಕಾರು ಗ್ರಾಮದ 55 ವರ್ಷ ವಯಸ್ಸಿನ ಪುರುಷ, ಕೋಡಿಂಬಾಳ ಗ್ರಾಮದ 45 ವರ್ಷ ವಯಸ್ಸಿನ ಪುರುಷರೊಬ್ಬರಲ್ಲಿ ಕೊರೋನ ಸೋಂಕು ದೃಢಪಟ್ಟಿದೆ. ಇದರೊಂದಿಗೆ ಈ ತನಕ ಪುತ್ತೂರು ಮತ್ತು ಕಡಬ ತಾಲೂಕಿನಲ್ಲಿ ವರದಿಯಾದ ಕೊರೋನ ಪಾಸಿಟಿವ್ ಪ್ರಕರಣಗಳ ಒಟ್ಟು ಸಂಖ್ಯೆ 111ಕ್ಕೆ ಏರಿಕೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News