×
Ad

ಭಟ್ಕಳ: ಕೇಂದ್ರದ ಮಾರ್ಗಸೂಚಿಯನ್ನು ಜಾರಿಗೆ ತರುವಂತೆ ಇನಾಯತುಲ್ಲಾ ಶಾಬಂದ್ರಿ ಆಗ್ರಹ

Update: 2020-07-21 17:55 IST

ಭಟ್ಕಳ: ಕೊರೋನ ಪಾಸಿಟಿವ್ ರೋಗಿಗಳಿಗೆ ಮನೆ ಕ್ಯಾರೆಂಟೈನ್ ಮಾಡಲು ಅವಕಾಶ ನೀಡಬೇಕು ಮತ್ತು ಕೇಂದ್ರ ಸರ್ಕಾರ ಹೊರಡಿಸಿದ ಮಾರ್ಗಸೂಚಿಗಳನ್ನು ಭಟ್ಕಳದಲ್ಲಿಯೂ ಜಾರಿಯಾಗಬೇಕೆಂದು ಜೆಡಿಎಸ್ ಅಧ್ಯಕ್ಷ ಇನಾಯತುಲ್ಲಾ ಶಾಬಂದ್ರಿ ಒತ್ತಾಯಿಸಿದ್ದಾರೆ. 

ಅವರು ಮಂಗಳವಾರ ಪತ್ರಿಕಾಗೋಷ್ಠಿ ನಡೆಸಿ, ಆರೋಗ್ಯ ಇಲಾಖೆ ಇಲ್ಲಿನ ಜನರ ಸಮಸ್ಯೆಗಳಿಗೆ ಸಕರಾತ್ಮಕವಾಗಿ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದ್ದು, ಭಟ್ಕಳದಲ್ಲಿ ಹೆಚ್ಚುತ್ತಿರುವ ಕೋವಿಡ್ ಸಾವಿನಿಂದಾಗಿ ಜನರ ಭಯಬೀತರಾಗಿದ್ದಾರೆ. ಇಂತಹ ಸಂದರ್ಭದಲ್ಲಿ ಆರೋಗ್ಯ ಇಲಾಖೆ ಕೇಂದ್ರದ ಮಾರ್ಗಾಸೂಚಿಗಳನ್ನು ಭಟ್ಕಳದಲ್ಲಿ ಜಾರಿಮಾಡುತ್ತಿಲ್ಲ, ಇದರಿಂದಾಗಿ ಜನರಲ್ಲಿ ಮತ್ತಷ್ಟು ಭಯ ಹೆಚ್ಚಾಗಲು ಕಾರಣವಾಗಿದೆ. ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡಾಗ ಮಾತ್ರ ಜನರು ಭಯವಿಲ್ಲದೆ ಮುಂದೆ ಬರಲು ಮತ್ತು ಅವರ ಕೊರೋನವನ್ನು ಪರೀಕ್ಷಿಸಲು ಸಾಧ್ಯವಾಗುತ್ತದೆ ಎಂಬ ಭರವಸೆ ವ್ಯಕ್ತಪಡಿಸಿದರು.

ಇಂದು ಜನರು ಕೆಮ್ಮು, ಶೀತ ಮತ್ತು ಜ್ವರದಿಂದ ಬಳಲುತ್ತಿರುವಾಗ ಒಂದು ರೀತಿಯ ಭಯ ಮತ್ತು ಭೀತಿಯನ್ನು ಅನುಭವಿಸುತ್ತಿದ್ದಾರೆ ಮತ್ತು ಅವರು ತಮ್ಮ ರೋಗಗಳನ್ನು ಮರೆಮಾಚುತ್ತಿದ್ದಾರೆ, ಅವರು ವೈದ್ಯರ ಬಳಿಗೆ ಹೋಗುತ್ತಿಲ್ಲ. ಜನರು ಕೊರೋನಗೆ ಹೆದರುವುದಿಲ್ಲ, ಆದರೆ ಅವರನ್ನು ಕ್ಯಾರೆಂಟೈನ್‍ಗೆ ಒಳಪಡುವುದಕ್ಕಾಗಿ ಹೆದರುತ್ತಿದ್ದಾರೆ.  ಯಾರಲ್ಲಿ ಕೊರೋನ ಲಕ್ಷಣಗಳು ಕಂಡು ಬರುವುದಿಲ್ಲವೂ ಅವರನ್ನು ಅವರದ್ದೇ ಮನೆಯಲ್ಲಿ ಕ್ವಾರೆಂಟೈನ್ ಮಾಡಿದರೆ ಕನಿಷ್ಠಪಕ್ಷ ಅವರಲ್ಲಿರುವ ಭಯವಾದರೂ ಹೊರಟು ಹೋಗುತ್ತದೆ. ಜನರ ಹೃದಯಗಳಲ್ಲಿ ಮನೆಮಾಡಿಕೊಂಡಿರುವ ಭಯವನ್ನು ಹೋಗಲಾಡಿಡುವ ಕಾರ್ಯ ಜಿಲ್ಲಾಡಳಿತ ಮಾಡಬೇಕು ಎಂದು ಅವರು ಆಗ್ರಹಿಸಿದರು. 

ಕೇಂದ್ರ ಸರ್ಕಾರ ಹೊರಡಿಸಿದ ಮಾರ್ಗಸೂಚಿಗಳ ಪ್ರತಿಗಳನ್ನು ಪತ್ರಕರ್ತರಿಗೆ ವಿತರಿಸಿದ ಅವರು, ಸರ್ಕಾರದ ಸೂಚನೆಗಳನ್ನು ಪಾಲಿಸಿದರೆ ಸಾಕು, ಅದು ಜನರ ಹೃದಯದಲ್ಲಿ ಭಯ ಮತ್ತು ಭೀತಿಯನ್ನು ಹೋಗಲಾಡಿಸುತ್ತದೆ. ಕೇಂದ್ರ ಸರ್ಕಾರ ಹೊರಡಿಸಿರುವ ಈ ಸ್ಪಷ್ಟ ಸೂಚನೆಗಳನ್ನು ನಮ್ಮ ಜಿಲ್ಲೆಯಲ್ಲಿ ಏಕೆ ಜಾರಿಗೆ ತರುತ್ತಿಲ್ಲ ಎಂದು ಪ್ರಶ್ನಿಸಿದರು.

ನೆಗೆಟಿವ್ ವರದಿಯ ಮಾಹಿತಿಯನ್ನು ಕೂಡಲೇ ತಿಳಿಸಿ: ಗಂಟಲು ದ್ರವ ಮಾದರಿ ತೆಗೆದುಕೊಂಡ ವ್ಯಕ್ತಿಯ ವರದಿ ಪಾಸಿಟಿವ್ ಬಂದರೆ ಅವರನ್ನು ಕರೆ ಮಾಡಿ  ತಿಳಿಸಲಾಗುತ್ತದೆ. ಆದರೆ ನೆಗೆಟಿವ್ ಬಂದಾಗ ಮಾತ್ರ ಹತ್ತು ದಿನಗಳಾದರೂ ಯಾವುದೇ ಮಾಹಿತಿ ನೀಡುವುದಿಲ್ಲ. ಇದರಿಂದಾಗಿ ಗಂಟಲು ದ್ರವ ನೀಡಿದ ವ್ಯಕ್ತಿ ಭಯ ಮತ್ತು ಆತಂಕದಲ್ಲಿಯೆ ದಿನಕಳೆಯುತ್ತಾನೆ.  ಸಹಾಯಕ ಆಯುಕ್ತರು ಈ ಕುರಿತು ಗಮನ ಹರಿಸಿ ಸಂಬಂಧಿಸಿದ ಅಧಿಕಾರಿಗಳಿಗೆ ಸೂಕ್ತ ಕ್ರಮವಹಿಸಬೇಕೆಂದೂ ಅವರು ಆಗ್ರಹಿಸಿದರು. 

ಮಧ್ಯಾಹ್ನದ ಲಾಕ್ಡೌನ್ ನಿಂದ ಪ್ರಯೋಜವಿಲ್ಲ: ಮಧ್ಯಾಹ್ನ 2 ರ ನಂತರ ನಗರದಲ್ಲಿ ಲಾಕ್‍ಡೌನ್ ಲಾಕ್ಡೌನ್ ಮಾಡುವುದರಿಂದ ಯಾವುದೇ ಪ್ರಯೋಜವಿಲ್ಲ. ಇದರಿಂದ ತೊಂದರೆಗಳೇ ಹೆಚ್ಚು ಎಂದು ಜೆಡಿಎಸ್ ಯುತ್ ಅಧ್ಯಕ್ಷ ಪಾಂಡುರಂಗ ನಾಯ್ಕ ಹೇಳಿದರು. 

ಪತ್ರಿಕಾಗೋಷ್ಠಿಯಲ್ಲಿ ಜೆಡಿಎಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಜೈನುಲ್ ಅಬಿದೀನ್, ಕೃಷ್ಣಾನಂದ್ ಪ್ರಭು ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News