×
Ad

‘ಕೊವೀಡ್- 19 ಬಿಸಿನೆಸ್ ಇಪ್ಯಾಕ್ಟ್’ ಆನ್‌ಲೈನ್ ಕಾರ್ಯಕ್ರಮ

Update: 2020-07-21 18:29 IST

ಉಡುಪಿ, ಜು.21: ಕೋವಿಡ್-19ನಿಂದಾಗಿ ಆರ್ಥಿಕ ವ್ಯವಸ್ಥೆಯು ಪತಾಳಕ್ಕೆ ಇಳಿದಿರುವ ವಿಷಯಕ್ಕೆ ಸಂಬಂಧಿಸಿ ಜಮಾಅತೆ ಇಸ್ಲಾಮೀ ಹಿಂದ್ ಉಡುಪಿ ಘಟಕದ ವತಿಯಿಂದ ಝೂಮ್ ಅಪ್ಲಿಕೇಷನ್ ಮೂಲಕ ಕೊವೀಡ್ -19 ಬಿಸಿನೆಸ್ ಇಪ್ಯಾಕ್ಟ್ ಎಂಬ ವಿಶೇಷ ಚರ್ಚಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಅಟೋಬಾ ಬಿಸಿನೆಸ್ ನೆಟ್ವರ್ಕ್ ಪ್ರೈ ಲಿಮಿಟೆಡ್‌ನ ಸಿಇಓ ಮುಂಬೈಯ ಮುಅಝಮ್ ನಾಯ್ಕ್, ಸೆಹಸತ್ ಕನ್ನಿಂಗ್ ಕಂಪನಿಯ ನಿರ್ದೇಶಕ ಗೋವಾದ ಮುಹಮ್ಮದ್ ಅನೀಸ್, ಜನಸೇವಾ ಕೋಆಪರೇಟಿವ್ ಸೊಸೈಟಿಯ ಉಪ ಆಡಳಿತ ನಿರ್ದೇಶಕ, ತಮಿಳುನಾಡು ವಾಣಿಯಂಬಾಡಿಯ ಅತೀಕುರ್ ರೆಹ್ಮಾನ್ ಇದರಲ್ಲಿ ಪಾಲ್ಗೊಂಡಿದ್ದರು.

ಮುಹಮ್ಮದ್ ಅನೀಸ್ ಮಾತನಾಡಿ, ಕೋವಿಡ್ 19ನ ಪ್ರಭಾವ ಪ್ರತೀ ಕ್ಷೇತ್ರದಲ್ಲಿ ನಾವು ಕಾಣಬಹುದು. ಆದರೆ ಬಹುತೇಕವಾಗಿ ಆರ್ಥಿಕ ಕ್ಷೇತ್ರದಲ್ಲಿ ಹಾಗೂ ವ್ಯಾಪಾರದಲ್ಲಿ ಇದರ ಪ್ರಭಾವವು ಜಗತ್ತನ್ನು ತಲ್ಲಣಗೊಳಿಸಿದೆ. ಆದರೆ ನಾವು ಕುರ್‌ಆನ್ ಮತ್ತು ಪ್ರವಾದಿ ಜೀವನದ ಶಿಕ್ಷಣದಿಂದ ಶಕ್ತಿಯನ್ನು ಪಡೆಯಬಹುದು ಎಂದು ಹೇಳಿದರು.

ಜಮಾಅತೆ ಇಸ್ಲಾಮೀ ಹಿಂದ್ ಎಚ್‌ಆರ್‌ಡಿ ಸೆಲ್ನ ಸಹ ಕಾರ್ಯದರ್ಶಿ ಅತೀಕುರ್ ರೆಹ್ಮಾನ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News