ತಾಲಿಬಾನ್ ಆತ್ಮಹತ್ಯಾ ದಾಳಿ; 8 ಸೈನಿಕರ ಸಾವು

Update: 2020-07-21 18:16 GMT

ಕಾಬೂಲ್ (ಅಫ್ಘಾನಿಸ್ತಾನ), ಜು. 21: ಮಧ್ಯ ಅಫ್ಘಾನಿಸ್ತಾನದಲ್ಲಿ ಸೇನಾ ಪಡೆಗಳ ವಾಹನಗಳ ಸಾಲನ್ನು ಗುರಿಯಾಗಿಸಿ ಆತ್ಮಹತ್ಯಾ ಕಾರ್ ಬಾಂಬರ್ ಓರ್ವ ನಡೆಸಿದ ದಾಳಿಯಲ್ಲಿ 8 ಸೈನಿಕರು ಮೃತಪಟ್ಟಿದ್ದಾರೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.

ದಾಳಿಯ ಹೊಣೆಯನ್ನು ತಾಲಿಬಾನ್ ಭಯೋತ್ಪಾದಕ ಗುಂಪು ವಹಿಸಿಕೊಂಡಿದೆ.

ಒಪ್ಪಂದದಂತೆ ಜೈಲಿನಲ್ಲಿರುವ ನೂರಾರು ತಾಲಿಬಾನ್ ಭಯೋತ್ಪಾದಕರನ್ನು ಅಫ್ಘಾನ್ ಸರಕಾರ ಬಿಡುಗಡೆ ಮಾಡದ ಹಿನ್ನೆಲೆಯಲ್ಲಿ, ತಾಲಿಬಾನ್ ಮತ್ತು ಸರಕಾರಿ ಪಡೆಗಳ ನಡುವೆ ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಸಂಘರ್ಷ ನಡೆಯುತ್ತಿದೆ.

ವರ್ದಕ್ ಪ್ರಾಂತದ ಸಯೀದ್ ಅಬಾದ್ ಜಿಲ್ಲೆಯಲ್ಲಿ ಸೋಮವಾರ ಸೈನಿಕರನ್ನು ಗುರಿಯಾಗಿಸಿ ಕಾರ್ ಬಾಂಬರ್ ಓರ್ವ ದಾಳಿ ನಡೆಸಿದ್ದು, 8 ಸೈನಿಕರು ಮೃತಪಟ್ಟಿದ್ದಾರೆ ಹಾಗೂ ಒಂಬತ್ತು ಮಂದಿ ಗಾಯಗೊಂಡಿದ್ದಾರೆ ಎಂದು ಹೇಳಿಕೆಯೊಂದರಲ್ಲಿ ರಕ್ಷಣಾ ಸಚಿವಾಲಯ ತಿಳಿಸಿದೆ.

ದಾಳಿಯ ಹೊಣೆಯನ್ನು ಹೊತ್ತಿರುವ ತಾಲಿಬಾನ್, ಡಝನ್‌ಗಟ್ಟಳೆ ಅಫ್ಘಾನ್ ಸೈನಿಕರು ಹತರಾಗಿದ್ದಾರೆ ಎಂದು ಹೇಳಿಕೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News