ಕೊರೋನ ಹಿನ್ನೆಲೆಯಲ್ಲಿ ರಶ್ಯದ ಸೇನಾ ವೆಚ್ಚ ಕಡಿತ?

Update: 2020-07-21 18:17 GMT

ಮಾಸ್ಕೋ (ರಶ್ಯ), ಜು. 21: ಕುಸಿಯುತ್ತಿರುವ ತೈಲ ಬೆಲೆಗಳು ಮತ್ತು ಕೊರೋನ ವೈರಸ್ ಬಿಕ್ಕಟ್ಟಿನಿಂದಾಗಿ ಆರ್ಥಿಕತೆ ಕುಸಿದಿರುವ ಹಿನ್ನೆಲೆಯಲ್ಲಿ ಸೇನಾ ವೆಚ್ಚವನ್ನು ಕಡಿತಗೊಳಿಸುವ ಬಗ್ಗೆ ರಶ್ಯ ಪರಿಶೀಲಿಸುತ್ತಿದೆ ಎಂದು ಹಣಕಾಸು ಸಚಿವಾಲಯ ಪ್ರಕಟಿಸಿರುವ ದಾಖಲೆಯೊಂದು ಹೇಳಿದೆ.

2021 ಮತ್ತು 2023ರ ನಡುವಿನ ಅವಧಿಯಲ್ಲಿ ಸರಕಾರ ಸೇನೆಯ ಮೇಲೆ ಮಾಡುವ ಖರ್ಚನ್ನು 5 ಶೇಕಡದಷ್ಟು ಕಡಿತ ಮಾಡುವ ಪ್ರಸ್ತಾಪವನ್ನು ಸಚಿವಾಲಯ ಮುಂದಿಟ್ಟಿದೆ. ಅದೇ ವೇಳೆ, ನ್ಯಾಯಾಂಗ ವ್ಯವಸ್ಥೆ ಮತ್ತು ಸರಕಾರಿ ನೌಕರರ ವೇತನದ ಮೇಲೆ ಮಾಡುವ ಖರ್ಚನ್ನು 10 ಶೇಕಡದಷ್ಟು ಕಡಿತ ಮಾಡಬೇಕೆನ್ನುವ ಬಜೆಟ್ ಪ್ರಸ್ತಾಪವನ್ನೂ ಅದು ಮಂಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News