ಅಸ್ಸಾಮ್ ಪ್ರವಾಹ: ಭಾರತಕ್ಕೆ ನೆರವು ನೀಡಲು ಸಿದ್ಧ; ವಿಶ್ವಸಂಸ್ಥೆ ಘೋಷಣೆ

Update: 2020-07-21 18:59 GMT

ವಿಶ್ವಸಂಸ್ಥೆ, ಜು. 21: ಅಸ್ಸಾಮ್‌ನಲ್ಲಿ ತಲೆದೋರಿರುವ ಭೀಕರ ಪ್ರವಾಹದ ಹಿನ್ನೆಲೆಯಲ್ಲಿ, ಬೇಕಿದ್ದರೆ ಭಾರತ ಸರಕಾರಕ್ಕೆ ನೆರವು ನೀಡಲು ವಿಶ್ವಸಂಸ್ಥೆ ಸಿದ್ಧವಾಗಿದೆ ಎಂದು ವಿಶ್ವಸಂಸ್ಥೆಯ ಮಹಾಕಾರ್ಯದರ್ಶಿಯ ವಕ್ತಾರರೊಬ್ಬರು ತಿಳಿಸಿದ್ದಾರೆ.

ಈಶಾನ್ಯ ರಾಜ್ಯದಲ್ಲಿ ಭೀಕರ ಪ್ರವಾಹದಿಂದಾಗಿ 100ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ ಹಾಗೂ ಲಕ್ಷಾಂತರ ಮಂದಿ ನಿರ್ವಸಿತರಾಗಿದ್ದಾರೆ.

‘‘ಬಿರುಸಿನ ಮುಂಗಾರು ಮಳೆಯಿಂದಾಗಿ ಭಾರತದ ಅಸ್ಸಾಮ್ ರಾಜ್ಯ ಮತ್ತು ನೆರೆಯ ನೇಪಾಳದಲ್ಲಿ ತಲೆದೋರಿರುವ ಭಾರೀ ಪ್ರವಾಹದಿಂದಾಗಿ ಸುಮಾರು 40 ಲಕ್ಷ ಮಂದಿ ನಿರ್ವಸಿತರಾಗಿದ್ದಾರೆ ಎಂದು ಮಾನವೀಯ ನೆರವಿನಲ್ಲಿ ತೊಡಗಿಕೊಂಡಿರುವ ನಮ್ಮ ಸಹೋದ್ಯೋಗಿಗಳು ಹೇಳಿದ್ದಾರೆ. ಪ್ರವಾಹದಿಂದಾಗಿ ಈ ವಲಯದಲ್ಲಿ 189 ಮಂದಿ ಮೃತಪಟ್ಟಿದ್ದಾರೆ’’ ಎಂದು ವಕ್ತಾರ ಸ್ಟೀಫನ್ ಡುಜರಿಕ್ ಸೋಮವಾರ ನಡೆದ ದೈನಂದಿನ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘‘ಬೇಕಿದ್ದರೆ ಭಾರತ ಸರಕಾರಕ್ಕೆ ನೆರವು ನೀಡಲು ವಿಶ್ವಸಂಸ್ಥೆ ಸಿದ್ಧವಾಗಿದೆ’’ ಎಂದು ಅವರು ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News