ಕಾರ್ಕಳ: ಎರಡು ದಿನ ಸಿಟಿ ನರ್ಸಿಂಗ್ ಹೋಮ್ ಹೊರ ರೋಗಿ ವಿಭಾಗ ಸ್ಥಗಿತ

Update: 2020-07-21 18:23 GMT

ಕಾರ್ಕಳ,ಜು.21: ಸಾನಿಟೈಸ್ ಮಾಡಲಿರುವುದರಿಂದ ತಾಲೂಕಿನ ಸಿಟಿ ನರ್ಸಿಂಗ್ ಹೋಮ್ ನಲ್ಲಿ ಹೊರ ರೋಗಿ ವಿಭಾಗ(ಒಪಿಡಿ)ವನ್ನು ಎರಡು ದಿನ ಸ್ಥಗಿತಗೊಳಿಸಲಾಗಿದೆ.

ಜಿಲ್ಲೆಯಲ್ಲಿ ಕೊರೋನ ಪ್ರಕರಣ ಹೆಚ್ಚುತ್ತಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಆಸ್ಪತ್ರೆಯನ್ನು ಸ್ಯಾನಿಟೈಸ್ ಮಾಡುವ ಹಿನ್ನೆಲೆ ಜು.23 ರವರೆಗೆ ಹೊರರೋಗಿ ವಿಭಾಗ ಸ್ಥಗಿತಗೊಳಿಸಿದ್ದು, ಶುಕ್ರವಾರ(ಜು.24)ದಿಂದ ಎಂದಿನಂತೆ ಕಾರ್ಯಚರಿಸಲಿದೆ ಎಂದು ಸಿಟಿ ನರ್ಸಿಂಗ್ ಹೋಮ್ ಆಡಳಿತ ನಿರ್ದೇಶಕ ಡಾ. ರಿಝ್ವಾನ್ ತಿಳಿಸಿದ್ದಾರೆ.

ಒಳರೋಗಿ ವಿಭಾಗ ಎಂದಿನಂತೆ ಇರಲಿದೆ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News