ಭಾರತ ಮೂಲದ ಸಿಂಗಾಪುರ ನರ್ಸ್‌ಗೆ ಅಧ್ಯಕ್ಷೀಯ ಪ್ರಶಸ್ತಿ

Update: 2020-07-22 15:58 GMT

ಸಿಂಗಾಪುರ, ಜು. 22: ಕೋವಿಡ್-19 ಸಾಂಕ್ರಾಮಿಕದ ಅವಧಿಯಲ್ಲಿ ಮುಂಚೂಣಿಯಲ್ಲಿ ನಿಂತು ಸೇವೆ ಸಲ್ಲಿಸಿರುವುದಕ್ಕಾಗಿ ನರ್ಸ್‌ಗಳಿಗೆ ನೀಡಲಾಗುವ ಅಧ್ಯಕ್ಷೀಯ ಪ್ರಶಸ್ತಿಯನ್ನು ಸಿಂಗಾಪುರದಲ್ಲಿರುವ ಭಾರತ ಮೂಲದ ನರ್ಸ್ ಕಲಾ ನಾರಾಯಣಸಾಮಿಗೆ ನೀಡಲಾಗಿದೆ.

ಪ್ರಶಸ್ತಿಯನ್ನು ಐದು ನರ್ಸ್‌ಗಳಿಗೆ ನೀಡಲಾಗಿದ್ದು, ಆ ಪೈಕಿ 59 ವರ್ಷದ ಭಾರತ ಮೂಲದ ನರ್ಸ್ ಒಬ್ಬರಾಗಿದ್ದಾರೆ ಎಂದು ಸಿಂಗಾಪುರದ ಆರೋಗ್ಯ ಸಚಿವಾಲಯ ಮಂಗಳವಾರ ಪ್ರಕಟಿಸಿದೆ.

ಪ್ರಶಸ್ತಿಯು ಒಂದು ಟ್ರೋಫಿ, ಅಧ್ಯಕ್ಷೆ ಹಲೀಮಾ ಯಾಕೂಬ್ ಸಹಿ ಹಾಕಿದ ಪ್ರಮಾಣಪತ್ರ ಮತ್ತು 10,000 ಸಿಂಗಾಪುರ ಡಾಲರ್ (ಸುಮಾರು 5.40 ಲಕ್ಷ ರೂಪಾಯಿ) ನಗದು ಒಳಗೊಂಡಿದೆ.

ಕೊರೋನ ವೈರಸ್ ಸಾಂಕ್ರಾಮಿಕದ ಸಂದರ್ಭದಲ್ಲಿ ವಿಶಿಷ್ಟ ಸೋಂಕು ನಿಯಂತ್ರಣ ವಿಧಾನವನ್ನು ಅಳವಡಿಸಿಕೊಂಡಿರುವುದಕ್ಕಾಗಿ ಕಲಾ ನಾರಾಯಣಸಾಮಿಗೆ ಪ್ರಶಸ್ತಿ ನೀಡಲಾಗಿದೆ. ಈ ವಿಧಾನವನ್ನು ಅವರು 2003ರ ಸಾರ್ಸ್ ಸಾಂಕ್ರಾಮಿಕದ ವೇಳೆ ಕಲಿತುಕೊಂಡಿದ್ದರು.

ಸಿಂಗಾಪುರದಲ್ಲಿ ನರ್ಸಿಂಗ್ ವೃತ್ತಿಯನ್ನು ಆಧುನೀಕರಿಸಿದ ಹೆಗ್ಗಳಿಕೆಯನ್ನು ಅವರು ಹೊಂದಿದ್ದಾರೆ. 2000ದಲ್ಲಿ ಸ್ಥಾಪಿಸಿದಂದಿನಿಂದ 77 ನರ್ಸ್‌ಗಳಿಗೆ ಅಧ್ಯಕ್ಷೀಯ ಪ್ರಶಸ್ತಿಯನ್ನು ನೀಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News