×
Ad

ಅಂಚೆ ಮೂಲಕ ಮಕ್ಕಳ ರಾಜ್ಯಮಟ್ಟದ ಚಿತ್ರಕಲಾ ಸ್ಪರ್ಧೆ

Update: 2020-07-22 22:45 IST

ಕಾಪು, ಜು.22: ಜೆಸಿಐ ಕಟಪಾಡಿ ಮತ್ತು ಪ್ರಥಮ್ಸ್ ಮ್ಯಾಜಿಕ್ ವಲ್ಡರ್ ಕಟಪಾಡಿ ಇವುಗಳ ಸಹಯೋಗದೊಂದಿಗೆ 74ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಮಕ್ಕಳ ರಾಜ್ಯಮಟ್ಟದ ಚಿತ್ರಕಲಾ ಸ್ಪರ್ಧೆ(ಅಂಚೆ ಮೂಲಕ)ಯನ್ನು ಏರ್ಪಡಿಸಲಾಗಿದೆ.

ಸ್ಪರ್ಧೆಗೆ ಯಾವುದೇ ಶುಲ್ಕವಿಲ್ಲ. ಚಿತ್ರ ಸ್ವಂತದ್ದಾಗಿರಬೇಕು. ಹಿರಿಯ ಪ್ರಾಥಮಿಕ ವಿಭಾಗ(ವಿಷಯ: ನಮ್ಮ ರಾಷ್ಟ್ರಧ್ವಜ), ಪ್ರಾಥಮಿಕ ವಿಭಾಗ(ಧ್ವಜಾ ರೋಹಣ ಸಮಾರಂಭ), ಹಿರಿಯ ಪ್ರಾಥಮಿಕ ವಿಭಾಗ(ಸ್ವಾತಂತ್ರ್ಯ ದಿನಾ ಚರಣೆಯ ಸಂಭ್ರಮ), ಹೈಸ್ಕೂಲ್ ವಿಭಾಗ(ಸೇವ್ ಅವರ್ ನೇಶನ್- ಸ್ಟಾಪ್ ಚೈನಾ ಮೆಟಿರಿಯಲ್ಸ್ ಅಥವಾ ಮೈ ನೇಶನ್ ಮೈ ಆರ್ಮಿ) ವಿಭಾಗದಲ್ಲಿ ಸ್ಪರ್ಧೆ ನಡೆಯಲಿದೆ. ಪ್ರತಿ ವಿಭಾಗದಲ್ಲೂ ಪ್ರಥಮ, ದ್ವಿತೀಯ ಹಾಗೂ ತೃತೀಯ ನಗದು ಬಹುಮಾನವನ್ನು ನೀಡಲಾಗುವುದು.

ಬಹುಮಾನವನ್ನು ಆ.15ರಂದು ಕಟಪಾಡಿ ಪಳ್ಳಿಗುಡ್ಡೆ ಜೆ.ಸಿ.ಭವನದಲ್ಲಿ ವಿತರಿಸಲಾಗುವುದು. ಚಿತ್ರಗಳನ್ನು ಕಳುಹಿಸಲು ಆ.12 ಕೊನೆಯ ದಿನಾಂಕ. ಚಿತ್ರದ ಹಿಂದೆ ಮಕ್ಕಳ ಹೆಸರು,ತರಗತಿ, ಶಾಲೆ ಹೆಸರು, ಮನೆವಿಳಾಸ ಹಾಗೂ ಮೊ.ಸಂಖ್ಯೆಯನ್ನು ತಪ್ಪದೇ ನಮೂದಿಸಬೇಕು.

ಮನೆಯಲ್ಲೇ ಚಿತ್ರವನ್ನು ರಚಿಸಿ ಪೋಸ್ಟ್ ಅಥವಾ ಕೊರಿಯರ್ ಮೂಲಕ ಕೆ.ನಾಗೇಶ್ ಕಾಮತ್, ಪ್ರಥಮ್ಸ್ ಮ್ಯಾಜಿಕ್ ವರ್ಲ್ಡ್, ದೇವ ಸುಮ ಚಿಲ್ಮಿ ಮನೆ, ಕಟಪಾಡಿ -574105 ಉಡುಪಿ ಜಿಲ್ಲೆ(ಮೊ-9886432197, 9448623400, 9844741512, 99641 94767)ಇಲ್ಲಿಗೆ ಕಳುಹಿಸಬೇಕು ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News