ಕಾಸರಗೋಡು: ಬುಧವಾರ 101 ಮಂದಿಗೆ ಕೊರೋನ ಪಾಸಿಟಿವ್
ಕಾಸರಗೋಡು: ಜಿಲ್ಲೆಯಲ್ಲಿ ಬುಧವಾರ ಒಂದೇ ದಿನ 101 ಮಂದಿಗೆ ಕೊರೋನ ಸೋಂಕು ದೃಢಪಟ್ಟಿದೆ. 43 ಮಂದಿ ಗುಣಮುಖರಾಗಿದ್ದಾರೆ. ಪಾಸಿಟಿವ್ ಆದವರಲ್ಲಿ ಮೂವರು ವಿದೇಶದಿಂದ, 8 ಮಂದಿ ಇತರ ರಾಜ್ಯಗಳಿಂದ ಬಂದವರು ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದ್ದಾರೆ
ಸಂಪರ್ಕ ಮೂಲಕ ಸೋಂಕು: ನೀಲೇಶ್ವರ ನಗರಸಭೆಯ 56 ವರ್ಷದ ಮಹಿಳೆ, 19 ವರ್ಷದ ಯುವಕ, ಚೆಂಗಳ ಪಂಚಾಯತ್ ನ 10 ವರ್ಷದ ಬಾಲಕಿ, 34,51 ವರ್ಷದ ಪುರುಷರು, 35 ವರ್ಷದ ಮಹಿಳೆ, ಪಡನ್ನ ಪಂಚಾಯತ್ ನ 50 ವರ್ಷದ ಮಹಿಳೆ, 3 ವರ್ಷದ ಬಾಲಕ, 60 ವರ್ಷದ ಪುರುಷ, ಉದುಮಾ ಪಂಚಾಯತ್ ನ 36 ವರ್ಷದ ಪುರುಷ, ಬದಿಯಡ್ಕ ಪಂಚಾಯತ್ ನ 29, 30, 38, 60,29,21 ವರ್ಷದ ಪುರುಷರು, 32,52,30 ವರ್ಷದ ಮಹಿಳೆಯರು, 12,5,1 ವರ್ಷದ ಮಕ್ಕಳು, ಕಾರಡ್ಕ ಪಂಚಾಯತ್ ನ 37,26 ವರ್ಷದ ಪುರುಷರು, ಕುಂಬಡಾಜೆ ಪಂಚಾಯತ್ ನ 70,17,38,22,33 ವರ್ಷದ ಮಹಿಳೆಯರು, 45,40,21 ವರ್ಷದ ಪುರುಷರು, 3,9,16,12 ವರ್ಷದ ಮಕ್ಕಳು, ಬೆಳ್ಳೂರು ಪಂಚಾಯತ್ ನ 34,16,12 ವರ್ಷದ ಮಹಿಳೆಯರು, ಪುತ್ತಿಗೆ ಪಂಚಾಯತ್ ನ 30 ವರ್ಷದ ಪುರುಷ, ಕಾಞಂಗಾಡ್ ನಗರಸಭೆಯ 37 ವರ್ಷದ ಮಹಿಳೆ, ಕುಂಬಳೆ ಪಂಚಾಯತ್ ನ 40,49,42,21,18,45,62,40,69,65 ವರ್ಷದ ಮಹಿಳೆಯರು, 16,9 ವರ್ಷದ ಮಕ್ಕಳು, 25, 21, 25, 22, 32, 27, 19, 29, 49, 27, 23, 56, 35, 21, 57, 55, 60, 45, 20, 36, 78, 70, 42, 20, 18, 26, 28 ವರ್ಷದ ಪುರುಷರು, ಮಧೂರು ಪಂಚಾಯತ್ ನ 19 ವರ್ಷದ ಯುವತಿ, 21 ವರ್ಷದ ಯುವಕ, ಕಳ್ಳಾರ್ ಪಂಚಾಯತ್ ನ 36,31,50 ವರ್ಷದ ಪುರುಷರು, ಪನತ್ತಡಿ ಪಂಚಾಯತ್ ನ 35 ವರ್ಷದ ಪುರುಷ, ಚೆಮ್ನಾಡ್ ಪಂಚಾಯತ್ ನ 52 ವರ್ಷದ ಮಹಿಳೆ, ದೇಲಂಪಾಡಿ ಪಂಚಾಯತ್ ನ 60, ಮಂಜೇಶ್ವರ ಪಂಚಾಯತ್ ನ 27 ವರ್ಷದ ಪುರುಷರು, ಮಂಗಲ್ಪಾಡಿ ಪಂಚಾಯತ್ ನ 36 ವರ್ಷದ ಮಹಿಳೆ(ಆರೋಗ್ಯ ಕಾರ್ಯಕರ್ತೆ) ಸೋಂಕು ಬಾಧಿತರು.
ವಿದೇಶದಿಂದ ಆಗಮಿಸಿದವರು: ದುಬೈಯಿಂದ ಆಗಮಿಸಿದ ಈಸ್ಟ್ ಏಳೇರಿ ಪಂಚಾಯತ್ ನ 39 ವರ್ಷದ ಪುರುಷ, ಪನತ್ತಡಿ ಪಂಚಾಯತ್ ನ 53 ವರ್ಷದ ಪುರುಷ, ಕಾಸರಗೋಡು ನಗರಸಭೆಯ 18 ವರ್ಷದ ಯುವಕನಿಗೆ ಸೋಂಕು ದೃಢಪಟ್ಟಿದೆ.
ಇತರ ರಾಜ್ಯಗಳಿಂದ ಬಂದವರು: ಕರ್ನಾಟಕದ ವಿವಿಧೆಡೆಗಳಿಂದ ಬಂದಿದ್ದ ಈಸ್ಟ್ ಏಳೇರಿ ಪಂಚಾಯತ್ ನ 30 ವರ್ಷದ, ಪನತ್ತಡಿ ಪಂಚಾಯತ್ ನ 33,20 ವರ್ಷದ, ಕುಂಬಡಾಜೆ ಪಂಚಾಯತ್ ನ 27,28,30 ವರ್ಷದ, ಮೊಗ್ರಾಲ್ ಪುತ್ತೂರಿನ 29 ವರ್ಷದ ಪುರುಷರು ಸೋಂಕು ದೃಢಪಟ್ಟಿದೆ.
43 ಮಂದಿ ಗುಣಮುಖ: ಕಾಸರಗೋಡು ಜಿಲ್ಲೆಯಲ್ಲಿ ಬುಧವಾರ 43 ಮಂದಿ ಗುಣಮುಖರಾಗಿದ್ದಾರೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು.