×
Ad

ಭಟ್ಕಳ: ಲಾಕ್‌ಡೌನ್‌ಗೆ ಬೆಂಬಲ ಸೂಚಿಸದಂತೆ ಆಗ್ರಹ

Update: 2020-07-22 23:47 IST

ಭಟ್ಕಳ, ಜು.22: ತಾಲೂಕಿನಲ್ಲಿ ಲಾಕ್‌ಡೌನ್ ಮುಂದುವರಿಸಲು ಯಾವುದೇ ಕಾರಣಕ್ಕೂ ಬೆಂಬಲ ಸೂಚಿಸಬಾರದು ಎಂದು ಕೆಲವು ವ್ಯಾಪಾರಸ್ಥರು ತಂಝೀಮ್ ಕಚೇರಿ ಮುಂದೆ ಬಂದು ಮುಖಂಡರಿಗೆ ಆ್ರಹಿಸಿದ ಘಟನೆ ಬುಧವಾರ ನಡೆಯಿತು.

ಪಟ್ಟಣದಲ್ಲಿ ಯಾವುದೇ ಕಾರಣಕ್ಕೂ ತಂಝೀಮ್ ಸಂಸ್ಥೆಯವರು ಲಾಕಡೌನ್ ಮುಂದುವರಿಸಲು ಬೆಂಬಲಿಸಬಾರದು. ಲಾಕಡೌನ್ ತಕ್ಷಣ ತೆರವುಗೊಳಿಸಲು ಜಿಲ್ಲಾಡಳಿತವನ್ನು ಆಗ್ರಹಿಸಬೇಕು. ಈಗಾಗಲೇ ನಾಲ್ಕೈದು ತಿಂಗಳಿನಿಂದ ಭಟ್ಕಳ ಪಟ್ಟಣದ ಅಂಗಡಿಕಾರರು, ವ್ಯಾಪಾರಸ್ಥರು ನಿರಂತರ ಲಾಕ್‌ಡೌನ್‌ನಿಂದಾಗಿ ವ್ಯಾಪಾರ ವಹಿವಾಟು ಇಲ್ಲದೆ ತೊಂದರೆಯಲ್ಲಿ ಸಿಲುಕಿದ್ದಾರೆ. ಮತ್ತೆ ಲಾಕ್‌ಡೌನ್ ಮುಂದುವರಿಸಿದರೆ ಅಂಗಡಿಗಳನ್ನು ಖಾಯಂ ಮುಚ್ಚಿ ಮನೆಯಲ್ಲೇ ಇರಬೇಕಾದೀತು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸೋಂಕು ಹರಡುವುದನ್ನು ತಡೆಯಲು ಲಾಕ್‌ಡೌನ್ ಒಂದೇ ಪರಿಹಾರವಲ್ಲ. ರಾಜ್ಯದಲ್ಲಿ ಲಾಕ್‌ಡೌನ್ ಸಂಪೂರ್ಣ ತೆರವುಗೊಳಿಸಲಾಗಿದ್ದು, ಭಟ್ಕಳದಲ್ಲಿ ಯಾವುದೇ ಕಾರಣಕ್ಕೂ ಮುಂದು ವರಿಸಬಾರದು ಎಂದು ಆಗ್ರಹಿಸಿದರು.

ಆಕ್ರೋಶಗೊಂಡಿದ್ದ ಅಂಗಡಿಕಾರರನ್ನು ಸಮಾಧಾನಿಸಿದ ಮುಖಂಡರು ಮತ್ತು ಪತ್ರಕರ್ತರು ಭಟ್ಕಳದಲ್ಲಿ ಲಾಕ್‌ಡೌನ್ ತೆರವುಗೊಳಿಸಿ ಸಹಾಯಕ ಆಯುಕ್ತರು ಬೆಳಗ್ಗೆಯೇ ಆದೇಶ ಮಾಡಿದ್ದಾರೆ. ಬುಧವಾರದಿಂದಲೇ ಲಾಕಡೌನ್ ತೆರವುಗೊಳಿಸಲಾಗಿದೆ ಎಂದು ಸಮಜಾಯಿಷಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News