ಸಿಎಎ, ಎನ್‍ಆರ್ ಸಿ ವಿರೋಧಿಸಿ ನಿರ್ಣಯ ಅಂಗೀಕರಿಸಿದ ಸ್ಯಾನ್ ಫ್ರಾನ್ಸಿಸ್ಕೋ ನಗರಾಡಳಿತ

Update: 2020-07-23 11:09 GMT

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಜಾರಿಗೊಳಿಸಿರುವ ವಿವಾದಾತ್ಮಕ ಪೌರತ್ವ ತಿದ್ದುಪಡಿ ಕಾಯಿದೆ ಹಾಗೂ ಎನ್‍ಆರ್ ಸಿಯನ್ನು ಖಂಡಿಸಿ ಸ್ಯಾನ್ ಫ್ರಾನ್ಸಿಸ್ಕೋ ನಗರ ಮಂಡಳಿ ನಿರ್ಣಯ ಅಂಗೀಕರಿಸಿದೆ. ಈ ವಿವಾದಾತ್ಮಕ ಕ್ರಮವನ್ನು ಖಂಡಿಸಿರುವ ಆರನೇ ಅಮೆರಿಕನ್ ನಗರ ಸ್ಯಾನ್ ಫ್ರಾನ್ಸಿಸ್ಕೋ ಆಗಿದೆ.

ಈ ಹಿಂದೆ ಕ್ಯಾಂಬ್ರಿಡ್ಜ್, ಹಾಂಟ್ರಾಮ್ಕ್, ಸೈಂಟ್ ಪೌಲ್, ಆಲ್ಬನಿ ಹಾಗೂ ಸಿಯಾಟಲ್ ನಗರಾಡಳಿತಗಳು ಈ ಕಾಯಿದೆ ಖಂಡಿಸಿ ನಿರ್ಣಯ ಅಂಗೀಕರಿಸಿದ್ದವು.

 ಮಂಗಳವಾರ ಸ್ಯಾನ್ ಫ್ರಾನ್ಸಿಸ್ಕೋ ನಗರ ಮಂಡಳಿ  ಅಂಗೀಕರಿಸಿದ ನಿರ್ಣಯದಲ್ಲಿ ಈ ಕಾನೂನುಗಳು ``ಅಲ್ಪಸಂಖ್ಯಾತರ ಪೈಕಿ ಮಿಲಿಯಗಟ್ಟಲೆ ಜನರನ್ನು ದೇಶವಿಲ್ಲದವರಂತೆ ಮಾಡುತ್ತದೆ'' ಎಂದು ಹೇಳಿದೆ.

``ಸ್ಯಾನ್ ಫ್ರಾನ್ಸಿಸ್ಕೋ ನಗರಾಡಳಿತ ಸರಿಯಾದ ನಿಲುವು ಕೈಗೊಂಡಿದ್ದಕ್ಕೆ ನಮಗೆ ಹೆಮ್ಮೆಯಿದೆ ಹಾಗೂ ಜಾಗತಿಕವಾಗಿ ಸಿಎಎ ವಿರುದ್ಧ ಎದ್ದಿರುವ ಅಪಸ್ವರಕ್ಕೆ ಅದು  ತನ್ನ ನೈತಿಕ ಬೆಂಬಲ ನೀಡಿದೆ,''ಎಂದು  ಸ್ಯಾನ್ ಫ್ರಾನ್ಸಿಸ್ಕೋ  ಮಾನವ ಹಕ್ಕುಗಳ ಆಯೋಗದ ಆಯುಕ್ತರಾದ ಹಲಾ ಹಿಜಾಝಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News