×
Ad

​ಆರೋಗ್ಯ ಅಭಯಹಸ್ತ ಯೋಜನೆ: ಕಾಂಗ್ರೆಸ್ ಪೂರ್ವಭಾವಿ ಸಭೆ

Update: 2020-07-23 17:59 IST

ಉಡುಪಿ, ಜು.23: ಕಾಂಗ್ರೆಸ್ ಪಕ್ಷ ಜಾರಿಗೆ ತಂದಿರುವ ಆರೋಗ್ಯ ಅಭಯ ಹಸ್ತ ಯೋಜನೆಯನ್ನು ಜಿಲ್ಲೆಯಾದ್ಯಂತ ಯಶಸ್ವಿಯಾಗಿ ನಡೆಸಲು ಜಿಲ್ಲಾ ಕಾಂಗ್ರೆಸ್ ಸಮಿತಿಯ ಪೂರ್ವಭಾವಿ ಸಭೆ ಬ್ರಹ್ಮಗಿರಿಯಲ್ಲಿರುವ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಬುಧವಾರ ನಡೆಯಿತು.

ಸಭೆಯಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್‌ಕುಮಾರ್ ಕೊಡವೂರು, ಕೆಪಿಸಿಸಿಯ ನೂತನ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಪದಗ್ರಹಣ ಕಾರ್ಯಕ್ರಮದ ಪ್ರತಿಜ್ಞಾ ದಿನದ ವೀಕ್ಷಣೆ ಜಿಲ್ಲೆಯಾದ್ಯಂತ ಅತ್ಯಂತ ಯಶಸ್ವಿಯಾಗಿ ನಡೆದಿದೆ. ಅದೇ ರೀತಿ ಆರೋಗ್ಯ ಅಭಯ ಹಸ್ತ ಯೋಜನೆಯನ್ನು ಕೂಡಾ ಜಿಲ್ಲಾದ್ಯಂತ ಯಶಸ್ವಿಯಾಗಿ ನಡೆಸುವಂತೆ ಮನವಿ ಮಾಡಿದರು.

ಸಭೆಯಲ್ಲಿ ಮಾತನಾಡಿದ ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಆರೋಗ್ಯ ಅಭಯಹಸ್ತ ಯೋಜನೆಯಡಿಯಲ್ಲಿ ಕಾಂಗ್ರೆಸ್ ಪಕ್ಷ ಪಂಚಾಯತ್ ಮಟ್ಟದಲ್ಲಿ ಸರ್ವೆ ನಡೆಸಿ ಕೊರೊನಾ ಪೀಡಿತರಿಗೆ ನೆರವಾಗಲಿದೆ ಅಲ್ಲದೆ ಈಗಿನ ಸರಕಾರದ ಪ್ರಜಾಪ್ರತಿನಿಧಿಗಳ ಕಾನೂನು ದುರ್ಬಳಕೆ ಮತ್ತು ಅವ್ಯವಹಾರಗಳ ಬಗ್ಗೆ, ಬೆಲೆ ಏರಿಕೆ ಬಗ್ಗೆ ತೀವ್ರತರವಾದ ಪ್ರತಿಭಟನೆ, ಮರಳು ಅಕ್ರಮದ ಬಗ್ಗೆ ತನಿೆಗೆ ಒತಾಯಿಸಲಾಗುವುದು ಎಂದರು.

ಮಾಜಿ ಶಾಸಕರಾದ ಬೈಂದೂರಿನ ಗೋಪಾಲ ಪೂಜಾರಿ, ಯು.ಆರ್. ಸಭಾಪತಿ ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎ.ಗಫೂರ್ ಮಾತನಾಡಿದರು. ಬ್ಲಾಕ್ ಅಧ್ಯಕ್ಷರಾದ ಪ್ರದೀಪ್ ಕುಮಾರ್ ಶೆಟ್ಟಿ (ವಂಡ್ಸೆ), ಮದನ್ ಕುಮಾರ್ (ಬೈಂದೂರು), ಹರಿಪ್ರಸಾದ್ ಶೆಟ್ಟಿ (ಕುಂದಾಪುರ), ಶಂಕರ್ ಕುಂದರ್ (ಕೋಟ), ನವೀನ್‌ಚಂದ್ರ ಸುವರ್ಣ (ಕಾಪು), ಶೇಖರ್ ಮಡಿವಾಳ (ಕಾರ್ಕಳ), ಮಂಜುನಾಥ ಪೂಜಾರಿ (ಹೆಬ್ರಿ), ಪ್ರವೀಣ್ ಶೆಟ್ಟಿ (ಕಾಪು ಉತ್ತರ) ಇವರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.

ವೆರೋನಿಕಾ ಕರ್ನೆಲಿಯೋ, ಡಾ.ಸುನೀತಾ ಶೆಟ್ಟಿ, ಬಾಲಕೃಷ್ಣ ನಾಯ್ಕಿ, ಲೂವಿಸ್ ಲೋಬೊ, ವಿಜಯ ಹೆಗ್ಡೆ ಸಿ, ಮಹಾಬಲ ಕುಂದರ್, ನಿತ್ಯಾನಂದ ಶೆಟ್ಟಿ, ಕುಶಲ್ ಶೆಟ್ಟಿ ಇಂದ್ರಾಳಿ, ನೀರೆಕೃಷ್ಣ ಶೆಟ್ಟಿ, ವಿಘ್ನೇಶ್ ಕಿಣಿ, ಮುರಳಿ ಶೆಟ್ಟಿ, ಹರೀಶ್ ಶೆಟ್ಟಿ ಪಾಂಗಾಳ ಮೊದಲಾದವರು ಅಭಿಪ್ರಾಯ ಮಂಡಿಸಿದರು.

ಈ ಸಂದರ್ಭದಲ್ಲಿ ಬಿ. ಹಿರಿಯಣ್ಣ, ಸುಧಾಕರ ಕೋಟ್ಯಾನ್, ಶಬ್ಬೀರ್ ಅಹ್ಮದ್, ರಾಜು ಪೂಜಾರಿ, ಡಾ.ಪ್ರೇಮದಾಸ್, ಜ್ಯೋತಿ ಹೆಬ್ಬಾರ್, ದೇವಿ ಪ್ರಸಾದ್ ಶೆಟ್ಟಿ, ವಿನಯ ಬಲ್ಲಾಳ್, ಕೆ. ಅಣ್ಣಯ್ಯ ಶೇರಿಗಾರ್, ಕಿಶನ್ ಹೆಗ್ಡೆ ಕೊಳ್ಕೆಬೈಲ್, ದೇವಕಿ ಸಣ್ಣಯ್ಯ, ಪಿ. ಬಾಲಕೃಷ್ಣ ಪೂಜಾರಿ, ಮುಷ್ತಾಕ್ ಅಹ್ಮದ್, ಹಬೀಬ್ ಅಲಿ, ಕೀರ್ತಿ ಶೆಟ್ಟಿ, ಇಸ್ಮಾಯಿಲ್ ಆತ್ರಾಡಿ, ರೋಶನಿ ಒಲಿವರ್, ಶಶಿಧರ ಶೆಟ್ಟಿ ಎಲ್ಲೂರು, ಉದ್ಯಾವರ ನಾಗೇಶ್‌ಕುಮಾರ್,ಎಂ.ಪಿ. ಮೊಯ್ದಿನಬ್ಬ, ರಾಜೇಶ್ ಶೆಟ್ಟಿ ಬ್ರಹ್ಮಾವರ, ಕೃಷ್ಣಮೂರ್ತಿ ಆಚಾರ್ಯ, ಪೀರು ಸಾಹೇಬ್, ಉಪೇಂದ್ರ ಗಾಣಿಗ ಮೊದಲಾದವರು ಉಪಸ್ಥಿತರಿದ್ದರು.

ಸಂಪಿಗೆಹಾಡಿ ಸಂಜೀವ ಶೆಟ್ಟಿ ಸ್ವಾಗತಿಸಿ, ಪ್ರಖ್ಯಾತ್ ಶೆಟ್ಟಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News