ಭಟ್ಕಳ: ಗುರುವಾರ 11 ಮಂದಿಗೆ ಕೊರೋನ ಸೋಂಕು ದೃಢ

Update: 2020-07-23 12:44 GMT

ಭಟ್ಕಳ: ಭಟ್ಕಳ ತಾಲೂಕಿನಲ್ಲಿ ಗುರುವಾರ 11 ಮಂದಿಗೆ ಕೊರೋನ ಸೊಂಕು ದೃಢಪಟ್ಟಿದ್ದು, ಇದರಲ್ಲಿ ಗ್ರಾಮೀಣ ಪ್ರದೇಶದಲ್ಲಿನ ಜನರಲ್ಲಿ  ಹೆಚ್ಚಿನ ಸಂಖ್ಯೆಯಲ್ಲಿ ಸೋಂಕು ಪತ್ತೆಯಾಗಿದೆ ಎನ್ನಲಾಗಿದೆ.

ತಾಲೂಕಿನ ಗ್ರಾಮೀಣ ಠಾಣೆಯ 59 ವರ್ಷದ ಪಿ.ಎಸ್.ಐ ಹಾಗೂ ಅದೇ ಠಾಣೆಯ ಪೊಲೀಸ್ ಸಿಬ್ಬಂದಿಯೋರ್ವರಿಗೆ ಸೋಂಕು ಇರುವುದು ಪತ್ತೆಯಾಗಿದೆ.

ತಾಲೂಕಿನ 25 ವರ್ಷದ ಇಬ್ಬರು ಯುವಕರು ಹಾಗೂ 40 ವರ್ಷದ ಪುರುಷ, ನವಾಯತ್ ಕಾಲೋನಿಯ 24 ವರ್ಷದ ಯುವತಿ, ಮುಗಳಿಹೋಂಡಾದ 70 ವರ್ಷದ ವೃದ್ಧ, ಕಾರಗದ್ದೆಯ 49 ವರ್ಷದ ವೃದ್ಧ, ಮುಟ್ಟಳ್ಳಿ ರೈಲ್ವೆ ಸ್ಟೇಶನ್ ಸಮೀಪದ 64 ವರ್ಷದ ವ್ರದ್ಧೆ, ಬೆಂಗ್ರೆ ನಿವಾಸಿ 44 ವರ್ಷದ ಮಹಿಳೆ, ಭಟ್ಕಳ ಶಾದ್ಲಿ ರಸ್ತೆಯ 39 ವರ್ಷದ ಪುರುಷನಲ್ಲಿ ಸೋಂಕು ಪತ್ತೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News