ಉಳ್ಳಾಲ ಬುಸ್ತಾನುಲ್ ಉಲೂಮ್ ಯೂತ್ ಅಸೋಸಿಯೇಷನ್ ವತಿಯಿಂದ ಉಚಿತ ಮಾಸ್ಕ್ ವಿತರಣೆ

Update: 2020-07-23 14:33 GMT

ಉಳ್ಳಾಲ,ಜು.23: ಉಳ್ಳಾಲ ಬುಸ್ತಾನುಲ್ ಉಲೂಮ್ ಯೂತ್ ಅಸ್ಸೋಸಿಯೇಷನ್ ವತಿಯಿಂದ ಟಿ-ಶರ್ಟ್ ಬಿಡುಗಡೆ, ಪೇಟೆ ಮೋಹಲ್ಲಾದ ಎಲ್ಲಾ ಮನೆಗಳಿಗೆ ಉಚಿತ ಮಾಸ್ಕ್ ವಿತರಣೆ ಮತ್ತು ಕೋವಿಡ್-19 ಬಗ್ಗೆ ಜನಜಾಗೃತಿ ಸಭೆಯನ್ನು ಏರ್ಪಡಿಸಲಾಗಿತ್ತು. 

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಅಬೂಬಕ್ಕರ್ ಸಿದ್ದಿಕ್ ಮಾತನಾಡಿ, ಕೊರೋನ ಬಗ್ಗೆ ಯಾರೂ ಭಯಪಡದೆ ಜಾಗ್ರತೆ ವಹಿಸಬೇಕು. ಕಡ್ಡಾಯವಾಗಿ ಮಾಸ್ಕ್ ಧರಿಸಿ ಸುರಕ್ಷಿತ ಅಂತರವನ್ನು ಕಾಯ್ದುಕೊಳ್ಳಬೇಕು ಎಂದರು.

ಉಳ್ಳಾಲ ನಗರಸಭೆ ಮಾಜಿ ಸದಸ್ಯ ಪೋಡಿಮೋನು ಮಾತನಾಡಿ, ಜ್ವರ ಅಥವಾ ಇನ್ನಿತರ ಲಕ್ಷಣಗಳು ಕಂಡು ಬಂದರೆ ನಿರ್ಲಕ್ಷ್ಯತೋರದೆ ವೈದ್ಯರನ್ನು ಭೇಟಿಯಾಗಲು ಸಲಹೆ ನೀಡಿದರು.

ಮುಖ್ಯ ಅತಿಥಿಗಳಾಗಿ ಪೇಟೆ ಮಸೀದಿಯ ಇಮಾಮ್ ನಿಝರ್ ಸಹದಿ, ಅಧ್ಯಕ್ಷ ಮೋಹಿದ್ದೀನ್ ಹಾಜಿ, ಕಾರ್ಯದರ್ಶಿ ಮುಸ್ತಾಫ್, ಬುಸ್ತಾನುಲ್ ಉಲೊಮ್ ಯೂತ್ ಅಸ್ಸೋಸಿಯೇಷನ್ ಅಧ್ಯಕ್ಷ ತೌಸೀಫ್ ಹುಸೈನ್, ಕಾರ್ಯದರ್ಶಿ ಅಝೀಮ್, ಜತೆ ಕಾರ್ಯದರ್ಶಿ ಶರಾಫತ್, ಖಜಾಂಚಿ ಅಫ್ರೀದ್, ಸದಸ್ಯ ಮುಸ್ತಫಾ ಕೊಟ್ಟರ, ಬದ್ರುದ್ದೀನ್, ಸಹಾಲ್, ಫಯಾಜ್, ಇರ್ಫಾನ್, ಇರ್ಷಾದ್ ಉಪಸ್ಥಿತರಿದ್ದರು. ಝೈದ್ ಸಲೀಮ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News