ಕಾಪು, ಪಡುಬಿದ್ರಿ:15 ಮಂದಿಗೆ ಕೊರೋನ ಸೋಂಕು ದೃಢ
Update: 2020-07-23 20:43 IST
ಪಡುಬಿದ್ರಿ, ಜು.23: ಗುರುವಾರ ಪಡುಬಿದ್ರಿ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ 12 ಮಂದಿಗೆ ಹಾಗೂ ಕಾಪುವಿನಲ್ಲಿ ಒಂದೇ ಕುಟುಂಬದಮೂವರಿಗೆ ಸೋಂಕು ದೃಢವಾಗಿದೆ.
ಪಡುಬಿದ್ರಿ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಹೆಜಮಾಡಿ, ಉಚ್ಚಿಲ, ನಡ್ಸಾಲು ಗ್ರಾಮಗಳಲ್ಲಿ ಹಿಂದಿನ ಸೋಂಕಿತರ ಪ್ರಾಥಮಿಕ ಸಂಪರ್ಕದಿಂದ ಕೋವಿಡ್ ದೃಢವಾಗಿದೆ.
ಉಚ್ಚಿಲದ 37ರ ಮಹಿಳೆ, ಬಡಾ ಗ್ರಾಮದ 59 ಹಾಗೂ 39ರ ಹರೆಯದ ಪುರುಷರು, ಹೆಜಮಾಡಿ ಗುಂಡಿಯ 32, 23, 19ರ ಹರೆಯದ ಮಹಿಳೆಯರು, 16 ಹಾಗೂ 19ರ ಹರೆಯದ ಯುವಕರು, ನಡ್ಸಾಲು ಗ್ರಾಮದ 35, 23 ಮತ್ತು 18ರ ಹರೆಯದ ಮಹಿಳೆಯರು, ನಡ್ಸಾಲು ಕೆರೆ ಬಳಿಯ 89ರ ಹರೆಯದ ವೃದ್ಧ ಕೊರೋನ ಬಾಧಿತರಾಗಿದ್ದಾರೆ. ಕಾಪುವಿನ ಕೊಪ್ಪಲಂಗಡಿಯಲ್ಲಿ 36 ಪುರುಷ, 29 ಮಹಿಳೆ ಹಾಗೂ ಒಂದು ವರ್ಷದ ಮಗು ಒಂದೇ ಕುಟುಂಬದ ಮೂವರಿಗೆ ಸೋಂಕು ದೃಢವಾಗಿದೆ.