ದುಬೈಯಲ್ಲಿ ಅಪಘಾತ: ಮಂಗಳೂರಿನ ಯುವತಿ ಮೃತ್ಯು

Update: 2020-07-23 15:18 GMT

ಮಂಗಳೂರು, ಜು.23: ದುಬೈಯಲ್ಲಿ ನಡೆದ ರಸ್ತೆ ಅಪಘಾತವೊಂದರಲ್ಲಿ ನಗರದ ವೆಲೆನ್ಸಿಯಾದ ಲೂಯಿಸ್-ದಿ. ತೆರೆಸಾ ಮೊಂತೇರೊ ಅವರ ಪುತ್ರಿ ಲುದಿನಾ ಮೊಂತೇರೊ ಎಂಬವರು ಮೃತಪಟ್ಟಿದ್ದಾರೆ.

ದುಬೈಯ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದ 30ರ ಹರೆಯದ ಲುದಿನಾ ಮೊಂತೆರೋ ಅವರು ಜು.12 ರಂದು ಸಂಸ್ಥೆಯ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ಶೇಕ್ ಝಯಾದ್ ರಸ್ತೆಯ ಸೇತುವೆಯೊಂದರ ಬಳಿ ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟಿದ್ದರು. ಈ ಬಸ್ಸಿನಲ್ಲಿ ಒಟ್ಟು 14 ಮಂದಿ ಪ್ರಯಾಣಿಸುತ್ತಿದ್ದು, ಎಲ್ಲರೂ ಗಾಯಗೊಂಡಿದ್ದರು.
ಗಂಭೀರ ಗಾಯಗೊಂಡಿದ್ದ ಲುದಿನಾ ಮೊಂತೇರೊ ಮತ್ತು ಇನ್ನೋರ್ವ ವ್ಯಕ್ತಿ ಸಹಿತ ಇಬ್ಬರು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News