ಮಂಗಳೂರು ಬಿಷಪ್‌ರಿಂದ ಮೂರು ಧರ್ಮಾಧಿಕಾರಿಗಳ ನೇಮಕ

Update: 2020-07-23 15:26 GMT

ಮಂಗಳೂರು,ಜು.23:ಮಂಗಳೂರು ಕ್ರೈಸ್ತಧರ್ಮ ಪ್ರ್ರಾಂತ್ಯದ ವಿವಿಧ ವಿಧಿ ವಿಧಾನಗಳ ನಿರ್ವಹಣೆಗೆ ಮೂರು ಧರ್ಮಾಧಿಕಾರಿಗಳನ್ನು (ಪ್ರೀಸ್ಟ್ ಹುಡ್) ನೇಮಕ ಮಾಡಿ ಪ್ರಾಂತ್ಯದ ಬಿಷಪ್ ಅತೀ.ವಂ.ಡಾ.ಪೀಟರ್ ಪೌಲ್ ಸಲ್ದಾನ ಆದೇಶ ನೀಡಿದ್ದಾರೆ.

ರಾಜ್ಯದಲ್ಲಿ ಕೊರೋನ ಹಿನ್ನೆಲೆಯಲ್ಲಿ ಜಾರಿ ಮಾಡಲಾಗಿದ್ದ ಲಾಕ್ ಡೌನ್ ತೆರವುಗೊಂಡ ಹಿನ್ನೆಲೆಯಲ್ಲಿ ಮುಂದೂಡಲಾಗಿದ್ದ ಕಾರ್ಯಕ್ರಮವನ್ನು ಜುಲೈ 23ರಂದು ಜೆಪ್ಪುವಿನ ಸೈಂಟ್ ಜೋಸೆಫ್ ಚರ್ಚ್‌ನಲ್ಲಿ ಮುನ್ನೆಚ್ಚರಿಕಾ ಸುರಕ್ಷತಾ ಕ್ರಮಗಳೊಂದಿಗೆ ಹಮ್ಮಿಕೊಳ್ಳಲಾಗಿತ್ತು. ನೂತನವಾಗಿ ಧರ್ಮಾಧಿಕಾರಿಗಳಾಗಿ ವಿಟ್ಲ ಮಾಣಿಲ ಚರ್ಚ್ ನ ವಂ.ಲ್ಯಾನ್ಸಿ ಡಿಸೋಜ ,ಬೆಳ್ತಂಗಡಿಯ ಇಂದಬೆಟ್ಟುವಿನ ಸೈಂಟ್ ಫ್ರಾನ್ಸಿಸ್ ಚರ್ಚ್‌ನ ವಂ.ವಿಲಿಯಂ ಡಿಸೋಜ, ಪಕ್ಷಿಕೆರೆಯ ಸೈಂಟ್ ಜುದೇ ಚರ್ಚ್‌ನ ವಂ.ಸ್ಟೀವನ್ ಜೊಯೆಲ್ ಕುಟಿನ್ಹಾ ನೂತನ ಧಮಾಧಿಕಾರಿಗಳಾಗಿ ನೇಮಕಗೊಂಡರು. ಮೂರು ಧರ್ಮಾಧಿಕಾರಿಗಳನ್ನು ನೇಮಿಸುವ ಕಾರ್ಯಕ್ರಮ ಕೋವಿಡ್ -19 ನಿಯಮಾವಳಿಯ ಹಿನ್ನೆಲೆಯಲ್ಲಿ ಸೀಮಿತ ಪ್ರತಿನಿಧಿಗಳೊಂದಿಗೆ ಸುರಕ್ಷತಾ ಕ್ರಮಗಳೊಂದಿಗೆ ಸರಳವಾಗಿ ನಡೆಯಿತು.

ಪ್ರಾಮಾಣಿಕತೆ, ಸಮರ್ಪಣಾ ಮನೋಭಾವ, ಪ್ರೀತಿಯೊಂದಿಗೆ ಜನರ ಸೇವೆ ಸಲ್ಲಿಸುವ ಮನೋಭಾವದೊಂದಿಗೆ, ಬದ್ಧತೆಯೊಂದಿಗೆ ತಮ್ಮ ಪವಿತ್ರ ಕರ್ತವ್ಯದ ಮೂಲಕ ದೈವತ್ವದ ಪಾವಿತ್ರತೆಯನ್ನು ಉಳಿಸಿಕೊಂಡು ಗೌರವಕ್ಕೆ ಪಾತ್ರರಾಗಬೇಕೆಂದು ಬಿಷಪ್ ನೂತನ ಧಮಾಧಿಕಾರಿಗಳಿಗೆ ಸಂದೇಶ ನೀಡಿದರು. ಹಿರಿಯ ಧರ್ಮ ಗುರುಗಳು ನೂತನ ಧರ್ಮಾಧಿಕಾರಿಗಳನ್ನು ಸ್ವಾಗತಿಸಿದರು.

ಈ ಸಂದರ್ಭದಲ್ಲಿ ವಿಕಾರ್ ಜನರಲ್ ಎಂ.ಮ್ಯಾಕ್ಸಿಂ ಎಲ್ ನರ್ಹೋನ್ನಾ, ಪ್ರಧಾನ ಧರ್ಮ ಗುರುಗಳಾದ ವಂ.ವಿಕ್ಟರ್ ಜಾರ್ಜ್ ಡಿಸೋಜ, ಸೆಮಿನರಿಯ ರೆಕ್ಟರ್ ವಂ.ಡಾ.ರೋನಾಲ್ಡ್ ಸೆರಾವೋ, ಡೀನ್ ವಂ.ಜೆ.ಬಿ.ಕ್ರಾಸ್ತಾ, ಡಿಬಿಸಿಎಲ್‌ಸಿ ನಿರ್ದೇಶಕ ವಂ.ವಿಜಯ್ ಮಚಾದೋ ಮೊದಲಾದರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News