×
Ad

ಕಡಲ್ಕೊರೆತ: ಪಡುಬಿದ್ರಿ ಬೀಚ್‍ಗೆ ಜಿಲ್ಲಾಧಿಕಾರಿ ಭೇಟಿ

Update: 2020-07-23 23:03 IST

ಪಡುಬಿದ್ರಿ: ಕಡಲ್ಕೊರೆತದಿಂದ ಹಾನಿಗೊಳಗಾದ ಪಡುಬಿದ್ರಿ ಬೀಚ್ ಪ್ರದೇಶಕ್ಕೆ ಉಡುಪಿ ಜಿಲ್ಲಾಧಿಕಾರಿ ಗುರುವಾರ ಮಧ್ಯಾಹ್ನ ಭೇಟಿ ನೀಡಿ ಪರಿಶೀಲನೆ ನಡೆಸಿದರು. 

ಬೀಚ್‍ನ ಪ್ರಾರಂಭ ಹಂತದ ಕಾಮಗಾರಿಯ ವೇಳೆ ನೈಸರ್ಗಿಕ ಸಂಪತ್ತನ್ನು ಉಳಿಸಿಕೊಳ್ಳದೆ ಈ ಪ್ರದೇಶದಲ್ಲಿ ಸಮತಟ್ಟು ಮಾಡಿ ಹೂಳೆತ್ತಲಾಗಿದೆ. ಬೀಚ್ ಸಾರ್ವಜನಿಕ ವಲಯಕ್ಕೆ ತೆರೆದುಕೊಂಡ ಕೆಲವೇ ವರುಷಗಳ ಒಳಗೆ ಸಮುದ್ರ ಪಾಳಾಗಿದೆ. ಕಡಲ್ಕೊರೆತ ಸಮಸ್ಯೆ ಕಳೆದೆರಡು ವರುಷಗಳಿಂದ ಉಲ್ಭಣಿಸಿದ್ದು ಸ್ಥಳೀಯರ ಅಸ್ತಿತ್ವಕ್ಕೆ ಮಾರಕವಾಗುತ್ತಿದೆ. ಬೀಚ್‍ನ ಸೌಂದರ್ಯ ಹೆಚ್ಚಿಸಿ ಅಭಿವೃದ್ಧಿ ಗಳಿಸಲು ಸ್ಥಳೀಯರ ವಿರೋಧ ಇಲ್ಲದಿದ್ದರೂ, ಆಡಳಿತ ಮತ್ತು ಸರ್ಕಾರ ಕೇವಲ ವೈಜ್ಞಾನಿಕ ರೀತಿಯಲ್ಲಿ ಅಭಿವೃದ್ಧಿ ಮಾಡಬೇಕು. ಮುಂದಿನ ದಿನಗಳಲ್ಲಿ ಬೀಚ್ ಅಭಿವೃದ್ಧಿಯ ಕಾಮಗಾರಿಯು ವೈಜ್ಞಾನಿಕ ರೂಪುರೇಷೆಯೊಂದಿಗೆ ಮುಂದುವರಿಯಬೇಕು ಎಂದು ಆಗ್ರಹಿಸಿದರು. 

ಪಡುಬಿದ್ರಿಯಲ್ಲಿ ಬೀಚ್ ಆಭಿವೃದ್ಧಿ ಕಾಮಗಾರಿಗಳ ಬಗ್ಗೆ ಪರಿಶೀಲನೆ ನಡೆಸಿ ಮುಂದಿನ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಜಿಲ್ಲಾಧಿಕಾರಿಯವರು ಈ ಸಂದರ್ಭ ತಿಳಿಸಿದರು.

ಬ್ಲೂಫ್ಲಾಗ್ ಬೀಚ್‍ಗೆ ಭೇಟಿ: ಪಡುಬಿದ್ರಿಯಲ್ಲಿ ನಿರ್ಮಾಣ ಹಂತದಲ್ಲಿರುವ ಅಂತರಾಷ್ಟ್ರೀಯ ಮಾನ್ಯತೆ ಪಡೆಯಲಿರುವ ಬ್ಲೂಫ್ಲಾಗ್ ಬೀಚ್‍ಗೆ ಡಿಸಿ ಜಿ. ಜಗದೀಶ್ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಬ್ಲೂಫ್ಲಾಗ್ ಬೀಚ್‍ನ ಕಾಮಗಾರಿಯ ವಿಜಯ್ ಹಾಗೂ  ದಿನೇಶ್ ಅವರೊಂದಿಗೆ ಮುಖ್ಯಸ್ಥರೊಂದಿಗೆ ಮಾಹಿತಿ ಪಡೆದುಕೊಂಡರು. 

ಈ ಸಂದರ್ಭದಲ್ಲಿ ಕಂದಾಯ ಇಲಾಖೆಯ ರವಿಶಂಕರ್, ಗ್ರಾಮಕರಣಿಕ ಶ್ಯಾಮ್ ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News