ಕಾಪು: ನಮ್ಮೂರ ಗೆಳೆಯರ ಬಳಗದಿಂದ ಪಿಪಿಇ ಕಿಟ್ ವಿತರಣೆ

Update: 2020-07-25 13:58 GMT

ಕಾಪು, ಜು.25: ಉಚ್ಚಿಲದ ನಮ್ಮೂರ ಗೆಳೆಯರ ಬಳಗ ಎಂಬ ವಾಟ್ಸಾಪ್ ಗ್ರೂಪ್ ಸದಸ್ಯರು ಕೋವಿಡ್-19 ಅಂತ್ಯಕ್ರಿಯೆ ನಡೆಸಲು ಅನುಕೂಲವಾಗಲು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಇದರ ಉಚ್ಚಿಲ ಡಿವಿಶನ್‌ಗೆ ಪಿಪಿಇ ಕಿಟ್‌ಗಳನ್ನು ಹಸ್ತಾಂತರಿಸಿದರು.

ಕುವೈತ್‌ನಲ್ಲಿ ಉದ್ಯೋಗದಲ್ಲಿರುವ ಉಚ್ಚಿಲ ಅಸುಪಾಸಿನ ಗೆಳೆಯರನ್ನೊಳ ಗೊಂಡ ಕರೀಂ ಹಸನ್ ಬಿರಾಲಿ ಮತ್ತು ಹಂಝು ಮಹಮ್ಮದ್ ನೇತೃತ್ವದ ಈ ಗ್ರೂಪ್ ವತಿಯಿಂದ ನೆರವು ನೀಡಲಾಗಿದೆ.

ನಮ್ಮೂರ ಗೆಳೆಯರ ಬಳಗದ ಸದಸ್ಯರಾದ ಅಲ್ತಾಫ್ ಎರ್ಮಾಳು, ಹನೀಫ್ ಮೋನಬ್ಬ, ಅಬ್ದುಲ್ ರಝಾಕ್ ಮೋನಬ್ಬ, ಪಿಎಫ್ಐ ಮುಖಂಡರಾದ ಸಿದ್ದೀಕ್ ಕನ್ನಂಗಾರ್, ಇಬ್ರಾಹಿಂ ಅರ್ಶ್ ಉಚ್ಚಿಲ, ಶರೀಫ್ ಕರೀಂ, ಕಲೀಲ್ ಉಮರ್, ಆಶಿಕ್ ಮೂಳೂರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News