ಅಕ್ರಮ ಗೋ ಸಾಗಾಟ: ನಾಲ್ವರ ವಿರುದ್ದ ಪ್ರಕರಣ ದಾಖಲು
Update: 2020-07-25 20:21 IST
ಪುತ್ತೂರು: ಕೇರಳಕ್ಕೆ ಪಿಕಪ್ ಒಂದರಲ್ಲಿ ಅಕ್ರಮವಾಗಿ ಗೋ ಸಾಗಾಟ ಮಾಡುತ್ತಿದ್ದ ಪ್ರಕರಣವನ್ನು ಶನಿವಾರ ಪತ್ತೆ ಹಚ್ಚಿದ ಸಂಪ್ಯ ಪೊಲೀಸರು ಗೋವು ಮತ್ತು ವಾಹವನ್ನು ವಶಕ್ಕೆ ಪಡೆದುಕೊಂಡಿದ್ದು, ನಾಲ್ವರ ವಿರುದ್ದ ಪ್ರಕರಣ ದಾಖಲಿಸಿದ್ದಾರೆ.
ಗೋವುಗಳನ್ನು ಕೆಯ್ಯೂರು ಗ್ರಾಮದ ಬೈರೆತ್ತಿಕೆರೆಯಿಂದ ಅರಿಕ್ಕಿಲ ಮಾರ್ಗವಾಗಿ ಕೇರಳಕ್ಕೆ ಸಾಗಾಟ ಮಾಡಲಾಗುತ್ತಿತ್ತು ಎನ್ನಲಾಗಿದ್ದು, ವಾಹನವನ್ನು ಅರಿಕ್ಕಿಲದಲ್ಲಿ ತಡೆದು ಪರಿಶೀಲನೆ ನಡೆಸಿದ ವೇಳೆಯಲ್ಲಿ ಪ್ರಕರಣ ಪತ್ತೆಯಾಗಿತ್ತು.
ಕಾರ್ಯಾಚರಣೆ ವೇಳೆ ವಾಹನದಲ್ಲಿದ್ದವರು ಪರಾರಿಯಾಗಿದ್ದು ಈ ಸಂದರ್ಭದಲ್ಲಿ ಓರ್ವ ಆರೋಪಿ ಬೈರೆತ್ತಿಕೆರೆ ನಿವಾಸಿ ಸುಲೈಮಾನ್ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಆತ ನೀಡಿದ ಮಾಹಿತಿಯಂತೆ ತಲೆ ಮರೆಸಿಕೊಂಡ ಆರೋಪಿಗಳಾದ ಆರ್ಲಪದವು ನಿವಾಸಿ ಮಹಮ್ಮದ್ ಅರ್ಶದ್ ಯಾನೆ ಅರ್ಫಾದ್, ಬೆಳ್ಳೂರು ನಿವಾಸಿ ಅಬ್ದುಲ್ ಸಲಾಂ ಮತ್ತು ಬೆಳ್ಳಾರೆ ನಿವಾಸಿ ಸಿದ್ದೀಕ್ ವಿರುದ್ದ ಪ್ರಕರಣ ದಾಖಲಿಸಲಾಗಿದೆ.